ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ನಾಪತ್ತೆ!

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ದುನಿಯಾ ವಿಜಿ ಅವರ ಹಲ್ಲೆ ಪ್ರಕರಣ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಎರಡನೇ ಪತ್ನಿ ಕೀರ್ತಿ ಗೌಡ ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ಮನೆಯಲ್ಲಿದ್ದ ಹಣ, 1 ಲಕ್ಷ ಬೆಲೆ ಬಾಳುವ ಒಡವೆ ದೋಚಿ ಪರಾರಿಯಾಗಿದ್ದಾರೆ ಎಂದು ದುನಿಯಾ ವಿಜಯ್ ಕುಟುಂಬದ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಕೀರ್ತಿ ಕತ್ರಿಗುಪ್ಪಿಯಲ್ಲಿರುವ ಮನೆಗೆ ಬರುತ್ತಿಲ್ಲ. ಅಷ್ಟೇ ಅಲ್ಲದೇ ನಾಗರತ್ನ ಅವರು ಕೂಡ ನನಗೆ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ. ವಿಜಯ್ ಅವರ ಮಕ್ಕಳಾದ ಮೋನಿಕ ಹಾಗೂ ಇನ್ನಿಬ್ಬರು, ಕೀರ್ತಿ ಅವರು ನಮಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ದುನಿಯಾ ವಿಜಿ ಮಗಳು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಕೀರ್ತಿಗೌಡ ಅವರು 4-5 ದಿನಗಳಿಂದ ಮನೆಯಲ್ಲಿ ಇಲ್ಲ. ಅವರು ಯಾವಾಗ ಹೋದರೋ ಗೊತ್ತಿಲ್ಲ. ನಾವು ಕಾಲೇಜಿಗೆ ಹೋಗಿದ್ದೇವು. ಮನೆಗೆ ಬಂದಾಗ ಮನೆಯಲ್ಲಿ ಅವರು ಮತ್ತು ಹಣ. ಒಡವೆ ಏನೂ ಇರಲಿಲ್ಲ. ನಿಮಗೆ ಎಷ್ಟು ವಿಷಯ ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕೀರ್ತಿಗೌಡ ಸೋಮವಾರ ವಿಜಯ್ ಅವರನ್ನು ನೋಡಲು ಹೋಗಿದ್ದರು. ಈ ವೇಳೆ ಮಕ್ಕಳು ಶಾಲೆ-ಕಾಲೇಜಿಗೆ ಹೋಗಿರುತ್ತಾರೆ. ಶಾಲೆ, ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಕೀರ್ತೀಗೌಡ ಮನೆಯಲ್ಲಿ ಇರಲಿಲ್ಲ. ಜೀವ ಬೆದರಿಕೆಯಿಂದ ಇರುವುದಕ್ಕೆ ಭಯದಿಂದ ಎಲ್ಲಾದರೂ ಹೋಗಿರಬಹುದು ಅಥವಾ ವಿಜಿ ಅವರು ಇಲ್ಲದ ಕಾರಣ ಇವರ ಬಳಿ ಇರುವುದು ಬೇಡ ಎಂದು ಹೋಗಿರಬಹುದು, ವಿಜಯ್ ಅವರು ಬಂದ ಬಳಿಕ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *