ಬೆಂಗಳೂರು: ಜೈಲಿನ ಆಹಾರ ಧಿಕ್ಕರಿಸಿದ್ದ ದುಜಿಯಾ ವಿಜಿ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ.
ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಅಲ್ಲದೇ ಬ್ಯಾರಕ್‍ಗೆ ಹೋಗಲ್ಲ ಎಂದಿದ್ದಕ್ಕೆ ಅವರಿಗೆ ಸೆಲ್ ನೀಡಲಾಗಿತ್ತು. ನಂತರ ಮನೆಯ ಊಟ, ತಿಂಡಿ ಬೇಕೆಂದು ಹಠ ಹಿಡಿದಿದ್ದರು. ಹೀಗಾಗಿ ದುನಿಯಾ ವಿಜಯ್‍ಗೆ ರವಿ ಹಾಗೂ ಸ್ನೇಹಿತರು ಮನೆಯಿಂದ ಊಟ ತಂದುಕೊಟ್ಟಿದ್ದಾರೆ.

ಮನೆಯಿಂದ ತಂದ ಆಹಾರವನ್ನು ಜೈಲಿನ ಒಳಗಡೆ ತರಲು ಜೈಲಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸೋಮವಾರ ಸರಿಯಾದ ಆಹಾರ ದೊರೆಯದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ದುನಿಯಾ ವಿಜಿ ಪ್ರತಿ ದಿನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಆಹಾರ ಸೇವಿಸುತ್ತಿದ್ದರು. ಪ್ರತಿದಿನ ಅವರು ಐದು ಬಾರಿ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಈಗ ಜೈಲಿನ ನಿಯಮಗಳ ಪ್ರಕಾರವೇ ಆಹಾರವನ್ನು ಸೇವಿಸಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply