ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

ತೆಲುಗಿನ ಹೆಸರಾಂತ ನಟ ನಂದಮೂರಿ ಬಾಲಕೃಷ್ಣ ಅವರ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು. ಒಂದು ಕಡೆ ದುನಿಯಾ ವಿಜಯ್ ಅವರ ಸಲಗ ಚಿತ್ರದ ಯಶಸ್ಸು ಮತ್ತೊಂದು ಕಡೆ ಬಾಲಯ್ಯ ಸಿನಿಮಾ, ಹೀಗಾಗಿ ವಿಜಯ್ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು


ಶುಕ್ರವಾರ ಎನ್.ಬಿ.ಕೆ 107 ಚಿತ್ರಕ್ಕೆ ಮುಹೂರ್ತವಾಗಿದೆ. ನಾಯಕ ಬಾಲಯ್ಯ, ನಾಯಕಿ ಶ್ರುತಿ ಹಾಸನ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ, ದುನಿಯಾ ವಿಜಯ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ದುನಿಯಾ ವಿಜಯ್ ಅವರಿಗೆ ಟಾಲಿವುಡ್ ನಲ್ಲಿ ಇದು ಮೊದಲ ಸಿನಿಮಾ. ಹಾಗಾಗಿ ಮುಹೂರ್ತ ಸಮಾರಂಭಕ್ಕೆ ಅವರನ್ನು ಕರೆಯಿಸಿ, ತೆಲುಗು ಸಿನಿಮಾ ರಂಗಕ್ಕೆ ವಿಜಯ್ ಅವರನ್ನು ಪರಿಚಯಿಸುತ್ತಾರೆ ಎನ್ನುವುದು ಅವರ ಅಭಿಮಾನಿಗಳ ನಂಬಿಕೆ ಆಗಿತ್ತು. ಅದು ಹುಸಿಯಾಗಿದೆ. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ


ಈ ಸಿನಿಮಾದಲ್ಲಿ ವಿಜಯ್ ಅವರಿಗೆ ಬೇರೆ ರೀತಿಯ ಗೆಟಪ್ ನೀಡಲಾಗಿದೆ. ಅಲ್ಲದೇ, ಅದೊಂದು ರೀತಿಯಲ್ಲಿ ನೆಗೆಟಿವ್ ಪಾತ್ರವಾಗಿದ್ದರಿಂದ ವಿಜಯ್ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಗುಟ್ಟುಗಳು ಮುಹೂರ್ತದಲ್ಲಿ ರಟ್ಟಾಗಬಾರದು ಎನ್ನುವ ಉದ್ದೇಶವೂ ಮುಹೂರ್ತದಿನದಂದು ಹೋಗದೇ ಇರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಶುಕ್ರವಾರವಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ದುನಿಯಾ ವಿಜಯ್, ಬಾಲಯ್ಯನ ತಂಡ ಸೇರಲಿದ್ದಾರೆ.

Comments

Leave a Reply

Your email address will not be published. Required fields are marked *