-ಬರ್ತ್ ಡೇ ಖುಷಿಯಲ್ಲಿ ಅಭಿಮಾನಿಗಳಿಗೆ ಗಿಫ್ಟ್
ಬೆಂಗಳೂರು: ತಮ್ಮ 45ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ನಿನ್ನೆ ರಾತ್ರಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಂಡರು.
ತಮ್ಮ ನೆಚ್ಚಿನ ನಟನಿಗೆ ಶೂಭಕೋರಲು ಹೊಸಕೆರೆ ಹಳ್ಳಿ ಬಳಿಯಿರುವ ವಿಜಿ ಅವರ ಮನೆ ಬಳಿ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಅಭಿನಿಮಾನಿಗಳು ತಂದ ಕೇಕ್ ಕತ್ತಿರಿಸಿದ ವಿಜಯ್, ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳಿಗೆ ಅಭಿನಂದನೆ ತಿಳಿಸಿದರು. ಹಾಗೆಯೇ ಈ ವೇಳೆ ಅಭಿಮಾನಿಗಳಿಗೆ ಗಿಫ್ಟ್ ಎನ್ನುವಂತೆ ದುನಿಯಾ ವಿಜಯ್ ಅಭಿನಯದ ಮುಂದಿನ ಸಿನಿಮಾ `ಸಲಗ’ ಚಿತ್ರದ ಟ್ರೇಲರ್ ಲಾಂಚ್ ಮಾಡಲಾಯ್ತು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ಇಟ್ಟಿರೋದಕ್ಕೆ ಧನ್ಯವಾದ. ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನು ಅಗಲಿರುವುದರಿಂದ ಈ ಬಾರಿ ಹುಟ್ಟುಹಬ್ಬವನ್ನು ಆಚರಿಕೊಳ್ಳೋದು ಬೇಡ ಅಂದುಕೊಂಡಿದ್ದೆ. ಆದ್ರೆ ಅಭಿಮಾನಿಗಳು ದೂರ ದೂರದ ಊರಿಂದ ನನಗೋಸ್ಕರ ಬಂದಿದ್ದಾರೆ. ಕೆಲವರು ಕಲಬುರಗಿ ಇಂದ ನಡೆದುಕೊಂಡೇ ಇಲ್ಲಿಯವರೆಗೆ ಬಂದಿದ್ದಾರೆ. ಅವರಿಗೆಲ್ಲ ಬೇಸರ ಮಾಡಲು ಮನಸ್ಸು ಬರಲಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply