ಧಾರಾಕಾರ ಮಳೆಗೆ ತುಂಬಿ ತುಳುಕುತ್ತಿದೆ ಗದಗದ ಐತಿಹಾಸಿಕ ಕೆರೆ- ಜನರ ಮೊಗದಲ್ಲಿ ಹರ್ಷದ ಕಳೆ

ಗದಗ: ವಿದೇಶಿ ಬಾನಾಡಿಗಳ ಆಗಮನದಿಂದ ಹೆಸರುವಾಸಿಯಾದ ಐತಿಹಾಸಿಕ ಕೆರೆ, ಬರಗಾಲಕ್ಕೆ ಬತ್ತಿಹೊಗಿತ್ತು. ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಕೆರೆ ಭರ್ತಿಯಾಗಿದೆ. ಇದರಿಂದ ಈ ಭಾಗದ ಪ್ರಾಣಿ-ಪಕ್ಷಿಗಳು ಹಾಗೂ ಜನರು ಫುಲ್ ಖಷಿಯಾಗಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ 134 ಎಕರೆ ವಿಸ್ತಿರ್ಣದ ಕೆರೆ ಮೊನ್ನೆಯಷ್ಟೇ ಸುರಿದ ಧಾರಾಕಾರ ಮಳೆಗೆ ಭರ್ತಿಯಾಗಿದೆ. ಇದೀಗ ಸಮೃದ್ಧ ಜಲ ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಬರ್ತಿದ್ದಾರೆ. ಕೆರೆಯ ಒಡಲು ತುಂಬಿದ್ದು, ಇದನ್ನು ಕಂಡ ಸ್ಥಳೀಯರ ಮೊಗದಲ್ಲಿ ಹರ್ಷದ ಕಳೆ ಕಾಣುತ್ತಿದೆ.

ಮಾಗಡಿ ಕೆರೆಗೆ 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗಿದೆ. ಕೆರೆಯ ಹಳೆಯ ದಿನಗಳು ಮರುಕಳಿಸಿವೆ. ಮೂರು ನಾಲ್ಕು ವರ್ಷಗಳ ನಂತರ ಮತ್ತೆ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಮಾಗಡಿ ಕೆರೆ ಸಜ್ಜಾಗಿದೆ. ಶೀಘ್ರವೇ ವಿದೇಶಿ ಹಕ್ಕಿಗಳ ಕಲರವ ಇರಲಿದೆ. ರೈತರ ಮೊಗದಲ್ಲೂ ಮಂದಹಾಸ ಮೂಡಿದೆ.

 

Comments

Leave a Reply

Your email address will not be published. Required fields are marked *