ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಬೇಲ್ ಪಡೆದ ರೌಡಿಶೀಟರ್‌ಗಳ ಜೊತೆ ರಸ್ತೆ ಮಧ್ಯೆಯೇ ಪಿಎಸ್‍ಐ ಒಬ್ಬರು ಡ್ಯಾನ್ಸ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡಿಸೆಂಬರ್ 18ರಂದು ನಗರದ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ್ ಹೂಗಾರ್, ರೌಡಿಶೀಟರ್ ಗಳಾದ ದುರ್ಗಪ್ಪ ಬಿಜವಾಡ, ಶಿವರಾಜ್ ಗೌರಿ ಹಾಗೂ ತಂಡದವರ ಜೊತೆಗೆ ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಪಿಎಸ್‍ಐ ಹೂಗಾರ್ ಖಾಕಿ ಸಮವಸ್ತ್ರದಲ್ಲೇ ತೂರಾಡಿರುವ ವಿಡಿಯೋ ವಾಟ್ಸಪ್ ಗಳಲ್ಲಿ ವೈರಲ್ ಆಗಿದೆ. ಪಿಎಸ್‍ಐ ಡ್ಯಾನ್ ವೈರಲ್ ಆದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ.

2011ರ ಸಬ್ ಜೈಲ್ ಗಲಾಟೆ ಪ್ರಕರಣದಲ್ಲಿ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ಎಂಬವರ ವಿರುದ್ಧ ಇದೇ ಅಶೋಕ ನಗರ ಪೆÇಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಡಿಸೆಂಬರ್ 16 ರಂದು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ವಿರುದ್ಧ ತೀರ್ಪು ನೀಡಿತ್ತು. ಅಲ್ಲದೇ ಮೂರು ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡವನ್ನು ಸಹ ವಿಧಿಸಿತ್ತು. ಆದರೆ ಆರೋಪಿಗಳಿಗೆ ಶಿಕ್ಷೆ ನೀಡಿದ್ದ ದಿನವೇ, ಬೇಲ್ ಮಂಜೂರಾಗಿತ್ತು.
https://www.youtube.com/watch?v=QrKJScyZEnM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply