ತಂದೆಯನ್ನ 50 ಮೀಟರ್ ದೂರ ಅಟ್ಟಾಡಿಸಿ, ಇಟ್ಟಿಗೆ-ಕಬ್ಬಿಣದ ಸಲಾಕೆಯಿಂದ ಜಜ್ಜಿ ಕೊಲೆಗೈದ!

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತನ್ನ ತಂದೆಯನ್ನ ಐವತ್ತು ಮೀಟರ್‍ನಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿ ಕೊಲೆಗೈದ ಘಟನೆ ಚಿಕ್ಕಮಗಳೂರು ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ನಡೆದಿದೆ.

50 ವರ್ಷದ  ತಂದೆ ಕೃಷ್ಣ ಅವರನ್ನ ಮಗ ನಾಗ (35) ಕೊಲೆ ಮಾಡಿದ್ದಾನೆ. ಇಟ್ಟಿಗೆಯಿಂದ ತನ್ನ ತಂದೆಯ ತಲೆ ಜಜ್ಜಿ ಬಳಿಕ ಅರ್ಧಗಂಟೆಗಳ ಕಾಲ ತಲೆಯನ್ನ ಕಬ್ಬಿಣದ ಸಲಾಖೆಯಿಂದ ಜಜ್ಜಿದ್ದಾನೆ. ಮನೆಯ ಸುತ್ತಮುತ್ತಲಿನ ಗೋಡೆಗಳೆಲ್ಲಾ ರಕ್ತಮಯವಾಗಿದೆ. ಕೂಡಲೇ ಸ್ಥಳೀಯರು ನಾಗನನ್ನ ಕಂಬಕ್ಕೆ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಿಮಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಮಗ ನಾಗನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಗನೇ ತನ್ನ ತಂದೆಯನ್ನ ಕೊಲೈಗದ ದೃಶ್ಯವನ್ನ ನೋಡಿದ ಪಕ್ಕದ ಮನೆಯ ಮಹಿಳೆಯರು ನಡುಗುತ್ತಾ ಬೆಚ್ಚಿ ಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *