ಕುಡಿದ ಮತ್ತಿನಲ್ಲಿ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

ಅನೇಕಲ್: ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಜಗಳ ನಡೆದು ಅಣ್ಣ ತಮ್ಮನ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಮ್ಮ ಸ್ಥಳದಲ್ಲೇ ಸಾವನಪ್ಪಿದ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ದೇವರಬೆಟ್ಟ ಗ್ರಾಮದಲ್ಲಿ ನಡೆದಿದೆ.

ದೇವರಬೆಟ್ಟ ಗ್ರಾಮದ ಗಣೇಶ್(32) ಅಣ್ಣ ಶಂಕರಪ್ಪನಿಂದ ಕೊಲೆಯಾದ ದುರ್ದೈವಿ. ಗಣೇಶ ಅನೇಕಲ್ ಸುತ್ತಮುತ್ತ ಕೂಲಿ ಕೆಲಸ ಮಾಡಿಕೊಂಡಿದ್ದು ಹಬ್ಬದ ಪ್ರಯುಕ್ತ ನಿನ್ನೆ ಸ್ವಗ್ರಾಮ ದೇವರಬೆಟ್ಟಕ್ಕೆ ತೆರಳಿದ್ದ. ಅಣ್ಣ, ತಮ್ಮ ಇಬ್ಬರು ಒಟ್ಟಿಗೆ ಸೇರಿ ಮದ್ಯಪಾನ ಪಾರ್ಟಿ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಶಂಕರಪ್ಪ ಮನೆಯಲ್ಲಿದ್ದ ಡಬ್ಬಲ್ ಬ್ಯಾರಲ್ ಗನ್ ನಿಂದ ತಮ್ಮನ ಮೇಲೆ ಗುಂಡು ಹರಿಸಿದ್ದಾನೆ. ಗುಂಡೇಟು ತಿಂದ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ತಮಿಳುನಾಡಿನ ಥಳಿ ಪೊಲೀಸರು ಆರೋಪಿ ಶಂಕರಪ್ಪನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *