ನನ್ನ ಮುಂದೆ ಬೆತ್ತಲಾಗಿ ಬಾ ಎಂದ ತಂದೆ -ನಿರಾಕರಿಸಿದ್ದಕ್ಕೆ ಚಾಕು ಹಿಡಿದು ಅಪ್ರಾಪ್ತ ಮಗಳನ್ನೇ ರೇಪ್ ಮಾಡ್ದ!

ಮುಂಬೈ: ಪಾಪಿ ತಂದೆಯೊಬ್ಬ ತನ್ನ 17 ವರ್ಷದ ಮಗಳನ್ನೇ ಚಾಕು ಹಿಡಿದು ಅತ್ಯಾಚಾರ ಮಾಡಿರುವ ಘಟನೆ ನಗರದ ನಾಗ್ಪುರದಲ್ಲಿ ನಡೆದಿದೆ.

ಈ ಘಟನೆ ಏಪ್ರಿಲ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆ ಮದ್ಯವ್ಯಸನಿಯನಾಗಿದ್ದು, ತನ್ನ ಮಗಳಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ವಿವರ: ಸಂತ್ರಸ್ತೆ ತಮ್ಮ ಪೋಷಕರು ಮತ್ತು ಸಹೋದರನ ಜೊತೆ ವಾಸಿಸುತ್ತಿದ್ದಳು. ಈಕೆಯ ಸಹೋದರಿಗೆ ಮದುವೆಯಾಗಿದ್ದು, ಬೇರೆ ಕಡೆ ವಾಸಿಸುತ್ತಿದ್ದರು. ಸಂತ್ರಸ್ತೆ ಪರೀಕ್ಷೆ ಮುಗಿದ ಬಳಿಕ ಮನೆಗೆ ಬಂದಿದ್ದಾಳೆ. ಆಗ ಆಕೆಯ ತಂದೆ ಹೊರತುಪಡಿಸಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭದಲ್ಲಿ ಅದಾಗಲೇ ಕುಡಿದು ಬಂದಿದ್ದ ಪಾಪಿ ತಂದೆ, ಬಟ್ಟೆ ಬಿಚ್ಚಿ ವಿವಸ್ತ್ರವಾಗಿ ತನ್ನ ಮುಂದೆ ಬಂದು ನಿಲ್ಲುವಂತೆ ಹೇಳಿದ್ದಾನೆ. ತಂದೆಯ ಮಾತನ್ನು ನಿರಾಕರಿಸಿದ ಸಂತ್ರಸ್ತೆ ಬಾತ್ ರೂಮಿಗೆ ತೆರಳಲು ಮುಂದಾಗಿದ್ದಾಳೆ.

ಈ ವೇಳೆ ದುಷ್ಟ ತಂದೆ ಆಕೆಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ತಂದೆಯ ವರ್ತನೆಯಿಂದ ಕಂಗೆಟ್ಟ ಮಗಳು ಆತನನ್ನು ಪಕ್ಕಕ್ಕೆ ತಳ್ಳಿ ಬಾತ್‍ರೂಮಿಗೆ ಹೋಗಿದ್ದಾಳೆ. ಇತ್ತ ಬಾತ್ ರೂಮ್ ಒಳಗಡೆ ಹೋದ ಮಗಳನ್ನೇ ಕಾಯುತ್ತಿದ್ದ ತಂದೆ, ಆಕೆ ಹೊರ ಬಂದ ಬಳಿಕ ಬೆಲ್ಟ್ ನಿಂದ ಆಕೆಗೆ ಹೊಡೆದು, ಚಾಕು ಹಿಡಿದು, ಹೆದರಿಸಿ ಅತ್ಯಾಚಾರ ಮಾಡಿದ್ದಾನೆ.

ಸಂತ್ರಸ್ತೆ ಸಹೋದರಿ ಮತ್ತು ತಾಯಿ ಮನೆಗೆ ಬಂದಾಗ ಅವರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಬಳಿಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅಲ್ಲದೇ ದುಷ್ಟ ತಂದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *