ರಸ್ತೆಯಲ್ಲಿ ಹೋಗ್ತಿದ್ದ ಹಾವಿನ ಮರಿಯನ್ನು ಹಿಡಿದು ತಿಂದೇ ಬಿಟ್ಟ

ಪಾಟ್ನಾ: ಪಾನಮತ್ತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಹಾವಿನ ಮರಿಯನ್ನು ತಿಂದು ಸಾವನ್ನಪ್ಪಿರುವ ವಿಚಿತ್ರ ಘಟನೆ ಶನಿವಾರ ನಡೆದಿದೆ.

ಮಹಿಪಾಲ್ ಹಾವಿನ ಮರಿ ತಿಂದು ಸಾವನ್ನಪ್ಪಿದ ವ್ಯಕ್ತಿ. ಅಮರೋಹಾ ಜಿಲ್ಲೆಯ ನಿವಾಸಿಯಾಗಿದ್ದ ಮಹಿಪಾಲ್ ಶನಿವಾರ ನಶೆಯಲ್ಲಿ ತೂರಾಡುತ್ತಾ ಬರುತ್ತಿದ್ದನು. ಈ ಮಧ್ಯೆ ಆತನಿಗೆ ಪುಟಾಣಿ ಹಾವಿನ ಮರಿಯೊಂದು ಸಿಕ್ಕಿದೆ. ಕೂಡಲೇ ಹಾವಿನ ಮರಿಯನ್ನು ಕೈಯಲ್ಲಿ ಹಿಡಿದುಕೊಂಡ ಮಹಿಪಾಲ್ ಅದರೊಂದಿಗೆ ಆಟವಾಡಿದ್ದಾನೆ.

ರಸ್ತೆಯಲ್ಲಿ ನಿಂತಿದ್ದ ಮಹಿಪಾಲ್ ನೋಡ ನೋಡುತ್ತಿದ್ದಂತೆ ಜೀವಂತ ಹಾವಿನ ಮರಿಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಮರಿಯನ್ನ ಹೊರ ಉಗುಳದೇ ಒಂದೆರಡು ಸಾರಿ ಅಗಿದು ನುಂಗಿದ್ದಾನೆ ಎಂದು ಹೇಳಲಾಗಿದೆ. ಹಾವಿನ ಮರಿಯನ್ನು ಬಾಯಿಯಲ್ಲಿ ಹಾಕಿಕೊಳ್ಳತ್ತಿದ್ದಂತೆ ಜನರು ಸೇರಿದ್ದಾರೆ. ಆರಂಭದಲ್ಲಿ ಆರೋಗ್ಯವಾಗಿ ಕಾಣಿಸುತ್ತಿದ್ದರೂ, ಕೆಲ ಸಮಯದ ಬಳಿಕ ಆತನ ದೇಹದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.

ಸ್ಥಳೀಯರು ಕೂಡಲೇ ಅಸ್ವಸ್ಥಗೊಂಡ ಮಹಿಪಾಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾವು ತಿಂದ ಬಳಿಕ ಬರೋಬ್ಬರಿ 4 ಗಂಟೆಯ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಹಿಪಾಲ್ ಹಾವು ತಿನ್ನುತ್ತಿರುವ ವಿಡಿಯೋವನ್ನು ಕೆಲವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಮಹಿಪಾಲ್‍ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವನ್ನಪ್ಪಿದ ಮಹಿಪಾಲ ಪತ್ನಿ ಹಾಗು ನಾಲ್ವರು ಮಕ್ಕಳನ್ನು ಅಗಲಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *