ನರ್ಸ್ ಜೊತೆಗೆ ಅನುಚಿತ ವರ್ತನೆ – IPS ಅಧಿಕಾರಿ ವಿರುದ್ಧ ಕೇಸ್

ಚಂಡೀಗಢ: ನರ್ಸ್ ಜೊತೆಗೆ ಅನುಚಿತವಾಗಿ ವರ್ತಿಸಿದ ಮತ್ತು ನಿಂದಿಸಿದ ಆರೋಪದಡಿ ಹರಿಯಾಣ ಕೇಡರ್ ಐಪಿಎಸ್ ಐಜಿ ಹೋಮ್ ಗಾರ್ಡ್ಸ್ ಹೇಮಂತ್ ಕಲ್ಸನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಂಚಕುಲದ ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯ ಡಿ-ಅಡಿಕ್ಷನ್ ಸೆಂಟರ್‌ಗೆ ರೋಗಿಯೊಬ್ಬರನ್ನು ಭೇಟಿಯಾಗಲು ಹೇಮಂತ್ ಕಲ್ಸನ್ ಅವರು ಬಂದಿದ್ದರು. ಈ ವೇಳೆ ಮದ್ಯದ ಬಾಟಲಿ ಹಾಗೂ ಪಾನ್ ಮಸಾಲ ಪ್ಯಾಕೆಟ್‍ನನ್ನು ಕೊಠಡಿಯೊಳಗೆ ಕೊಂಡೊಯ್ಯುತ್ತಿರುವುದನ್ನು ಗಮನಿಸಿ ನರ್ಸ್ ತಡೆಯಲು ಯತ್ನಿಸಿದ್ದಾರೆ. ಇದರಿಂದ ಐಪಿಎಸ್ ಅಧಿಕಾರಿ ನರ್ಸ್ ಜೊತೆಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಭಾಷಣದ ವೇಳೆ ನೀರು ಕೇಳಿದ್ದ ಅಧಿಕಾರಿಯ ನೆರವಿಗೆ ಬಂದ ನಿರ್ಮಲಾ ಸೀತಾರಾಮನ್

crime

ಕುಡಿದ ಮತ್ತಿನಲ್ಲಿದ್ದ ಐಪಿಎಸ್ ಅಧಿಕಾರಿ ಆಸ್ಪತ್ರೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮತ್ತು ಇತರ ರೋಗಿಗಳಿಗೂ ನಿರಂತರವಾಗಿ ನಿಂದಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ರೋಗಿಯನ್ನು ಕರೆದುಕೊಂಡು ಹೋಗುವುದಾಗಿ ರಂಪಾಟ ಮಾಡಿದ್ದಾರೆ. ಮಾನಸಿಕ ಅಸ್ವಸ್ಥ ರೋಗಿಗಳು ಆಸ್ಪತ್ರೆಯಲ್ಲಿ ಮಲಗಿರುವ ಕಾರಣ, ಕಿರಾಚಾಡುವುದನ್ನು ನಿಲ್ಲಿಸಬೇಕು ಎಂದು ನರ್ಸ್ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಯಾರ ಮಾತನ್ನು ಆಲಿಸದೇ ಹೇಮಂತ್ ಕಲ್ಸನ್ ನಿರ್ಲಜ್ಜವಾಗಿ ನಿಂದಿಸಿದ್ದಾರೆ. ಈ ವೇಳೆ ಸಮಾಧಾನ ಮಾಡಲು ನರ್ಸ್ ಮುಂದಾದಾಗ ಹೇಮಂತ್ ಕಲ್ಸನ್ ಅವರು ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇದೇ ವೇಳೆ ಸಿಬ್ಬಂದಿ ಮತ್ತು ವಾರ್ಡ್‍ನಲ್ಲಿದ್ದ ಜನರು ತಮ್ಮನ್ನು ರಕ್ಷಿಸಿದ್ದಾರೆ. ಅಲ್ಲದೇ ತಾವು ಹಿರಿಯ ಪೊಲೀಸ್ ಅಧಿಕಾರಿ ಎಂದು ಸಿಬ್ಬಂದಿಗೆ ಬೆದರಿಕೆಯೊಡ್ಡುವುದರ ಜೊತೆಗೆ ತನಗೂ ಕೂಡ ಲೈಂಗಿಕ ದೌರ್ಜನ್ಯದ ಬೆದರಿಕೆ ಹಾಕಿದ್ದಾರೆ ಎಂದು ನರ್ಸ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

police (1)

ಇದೀಗ ಸಹಾಯಕ ಪೊಲೀಸ್ ಆಯುಕ್ತ ಎಸಿಪಿ ಪಂಚಕುಲ ರಾಜ್ ಕುಮಾರ್ ಕೌಶಿಕ್ ಅವರು ಹೇಮಂತ್ ಗಾಡ್ಸ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 294 (ಸಾರ್ವಜನಿಕವಾಗಿ ಅಶ್ಲೀಲ ಪದ ಬಳಕೆ), 332 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 353 (ಸಾರ್ವಜನಿಕ ಸೇವಕರನ್ನು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್‌ ಪಡೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ಘನತೆಗೆ ಧಕ್ಕೆ ತರುವ ಉದ್ದೇಶದ ಪದ, ಸಂಜ್ಞೆ ಅಥವಾ ವರ್ತನೆ)ರ ಅಡಿ ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *