ತುಮಕೂರು: ಇಂದು ಬೆಳಂಬೆಳಗ್ಗೆ ಪೊಲೀಸ್ ಪೇದೆಯೊಬ್ಬರು ಕಂಠಪೂರ್ತಿ ಕುಡಿದು ತುಮಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬಿದ್ದು ಸಾರ್ವಜನಿಕರಿಂದ ಛೀ.. ಥೂ ಎಂದು ಬೈಸಿಕೊಂಡಿದ್ದಾರೆ. ಈ ಪೊಲೀಸಪ್ಪನ ವರ್ತನೆಗೆ ಸಾರ್ವಜನಿಕರ ಎದುರು ಸಹದ್ಯೋಗಿಗಳು ಸಹ ಮಜುಗರ ಪಟ್ಟುಕೊಂಡಿದ್ದಾರೆ.

ಜಬೀ ಎಂಬವರೇ ಫುಲ್ ಟೈಟ್ ಆಗಿ ರಸ್ತೆಯಲ್ಲಿ ಬಿದ್ದಿದ್ದ ಪೊಲೀಸ್ ಪೇದೆ. ಜಬೀ ಪಾವಗಡ ತಾಲೂಕಿನ ಅರಸೀಕೆರೆ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಇಂದು ಠಾಣೆಯ ಕೆಲಸಕ್ಕಾಗಿ ತುಮಕೂರಿಗೆ ಆಗಮಿಸಿದ್ದ ಜಬೀ, ಕಂಠಪೂರ್ತಿ ಕುಡಿದು ಪ್ರಜ್ಞೆ ತಪ್ಪಿ ಬಸ್ ನಿಲ್ದಾಣದ ಬಾರ್ ಮುಂದೆಯೇ ಮಲಗಿದ್ದಾರೆ. ಸಮವಸ್ತ್ರದಲ್ಲಿಯೇ ಜಬೀ ಬಿದ್ದಿದ್ದನ್ನ ಕಂಡ ಸ್ಥಳೀಯರು ಮುಖದ ಮೇಲೆ ನೀರು ಸುರಿದಿದ್ದಾರೆ. ಆದ್ರೆ ನೀರು ಸುರಿದರೂ ಪೊಲೀಸಪ್ಪ ಎಚ್ಚರಗೊಂಡಿಲ್ಲ.
ಕೊನೆಗೆ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಜಬೀ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.




https://www.youtube.com/watch?v=pg6_qeXrnkc

Leave a Reply