ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

ತುಮಕೂರು: ಕಂಠ ಪೂರ್ತಿ ಕುಡಿದ ಆಟೋ ಚಾಲಕನೋರ್ವ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ ಘಟನೆ ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದ ಬಳಿ ನಡೆದಿದೆ.

ಆಟೋ ಚಾಲಕ ಅಶೋಕ ಎಂಬಾತ ಅವಾಂತರ ಸೃಷ್ಟಿಸಿದ ಕುಡುಕ ಮಹಾಷಯ. ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದ ಆಟೋ ಚಾಲಕ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ್ದಾನೆ. ನಡು ರಸ್ತೆಯಲ್ಲಿ ಬಸ್ ಸೇರಿದಂತೆ ವಾಹನಗಳನ್ನು ಅಡ್ಡಗಟ್ಟಿ ಕಲ್ಲು ತೂರಿದ್ದಾನೆ. ಪರಿಣಾಮ ಹಲವು ಬಸ್ ಗಳ ಗಾಜು ಪುಡಿಪುಡಿಯಾಗಿವೆ.

ಅಶೋಕನ ರಂಪಾಟ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ ಎಣ್ಣೆ ಮತ್ತಿನಲ್ಲಿ ಪೊಲೀಸರ ವಾಹನವನ್ನೂ ಸಹ ಜಖಂಗೊಳಿಸಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಡುಕ ಆಟೋಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಹಾಗೂ ಅರೆಬೆತ್ತಲಾಗಿ ಅವಾಂತರ ಸೃಷ್ಟಿಸಿದಕ್ಕೆ ಪೊಲೀಸರು ದೂರು ದಾಖಲಿಸಿಕೊಂಡು ಕುಡುಕನನ್ನು ಬಂಧಿಸಿದ್ದಾರೆ.

https://www.youtube.com/watch?v=7fWPL8He_rs

Comments

Leave a Reply

Your email address will not be published. Required fields are marked *