ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಮ್ಯಾಶಿ ಅರೆಸ್ಟ್

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಡೀಲ್ ಸಂಬಂಧ ಅರೆಸ್ಟ್ ಆಗದ ಹಳೆಯ ಆರೋಪಿಯೊಬ್ಬ ಕೊನೆಗೂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮ್ಯಾಶಿ ಅರೆಸ್ಟ್ ಆದ ಮೋಸ್ಟ್ ವಾಂಟೆಂಡ್ ಡ್ರಗ್ ಡೀಲರ್. ಸ್ಯಾಂಡಲ್‍ವುಡ್ ನಲ್ಲಿ ಬಿರುಗಾಳಿಯೆಬ್ಬಿಸಿದ್ದ ಈ ಕೇಸ್ ನಲ್ಲಿ ನಟಿಯರು ಸೇರಿದಂತೆ ಸಾಕಷ್ಟು ಜನ ಅರೆಸ್ಟ್ ಆಗಿದ್ದರು. ಎ21 ಆರೋಪಿಯಾಗಿದ್ದ ಮ್ಯಾಶಿ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಬೆಂಗಳೂರಿನ ಬಹುತೇಕ ಪಾರ್ಟಿಗಳಿಗೆ ಈತನೇ ಡ್ರಗ್ ಪೂರೈಸುತ್ತಿದ್ದನು ಎನ್ನಲಾಗಿದೆ. ಅಲ್ಲದೆ ಡ್ರಗ್ ಕೇಸ್ ಆರೋಪಿಗಳ ಜೊತೆ ಪಾರ್ಟಿ ಮಾಡಿರುವ ಫೋಟೊಗಳು ಸಹ ಲಭ್ಯವಾಗಿದೆ.

ಒಂದು ಪ್ರಕರಣದಲ್ಲಿ ಬೇಲ್ ಪಡೆದು ರಾಜನಂತೆ ಎಂಟ್ರಿಕೊಟ್ಟ ಮ್ಯಾಶಿಗೆ ಸಿಸಿಬಿ ಪೊಲೀಸರು ಸರಿಯಾಗೇ ಬುದ್ದಿ ಕಲಿಸಿದ್ದಾರೆ. ಈ ಹಿಂದೆಯೇ ದಾಖಲಾಗಿದ್ದ ಮತ್ತೊಂದು ಎನ್‍ಡಿ ಪಿಎಸ್ ಪ್ರಕರಣದಲ್ಲಿ ಮ್ಯಾಶಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಂಜನಾ, ರಾಗಿಣಿಗೆ ಸಂಕಷ್ಟ:
ಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಮತ್ತೆ ಸಂಕಷ್ಟ ಎದುರಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಹೋಟೆಲಿನ ವಾಶ್ ರೂಮಿನಲ್ಲಿ ಅವಿತಿದ್ದ ನಟಿ ಸೋನಿಯಾ ವಶಕ್ಕೆ

ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ.  ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

Comments

Leave a Reply

Your email address will not be published. Required fields are marked *