ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

ಮುಂಬೈ:  ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ (NCB) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಡುಗೆ ಸಿಬ್ಬಂದಿಗೆ ತಾಯಿ ಗೌರಿ ಖಾನ್ ಸೂಚನೆ ನೀಡಿದ್ದಾರೆ.

ದಸರಾ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮನ್ನತ್ ನಿವಾಸದಲ್ಲಿ ಖೀರ್ ಮಾಡಲಾಗುತ್ತಿತ್ತು. ಇದನ್ನು ಶಾರೂಖ್ ಖಾನ್ ಪತ್ನಿ ಗೌರಿ ಗಮನಿಸಿದ್ದಾರೆ. ಅಲ್ಲದೆ ಅಡುಗೆ ಸಿಬ್ಬಂದಿಗೆ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಸಿಹಿ ತಿನಿಸು ಮಾಡದಂತೆ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

ಆರ್ಯನ್ ಖಾನ್ ಜೈಲು ಸೇರಿದ ಮೇಲೆ ಮನ್ನತ್ ನಲ್ಲಿ ಖುಷಿಯ ವಾತಾವರಣ ಇಲ್ಲ. ಅವರು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಗೌರಿ ಹಬ್ಬದ ದಿನಗಳಲ್ಲೂ ಸಿಹಿ ತಿನಿಸು ಮಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶ ಅಕ್ಟೋಬರ್ 20 ರಂದು ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *