ಡ್ರೋನ್ ಪ್ರತಾಪ್ ಮೇಕಪ್ ನೋಡಿ ಬೆಚ್ಚಿಬಿದ್ದ ತುಕಾಲಿ

‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಆಟಕ್ಕೆ ತೆರೆಬಿದ್ದಿದೆ. ಬಿಗ್ ಬಾಸ್ ಶೋ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ (Drone Prathap) ಸ್ಥಾನ ಪಡೆದಿದ್ದಾರೆ. ಈ ಬೆನ್ನಲ್ಲೇ ‘ಗಿಚ್ಚಿ ಗಿಲಿ ಗಿಲಿ-3’ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಪ್ರತಾಪ್ ಲುಕ್ ನೋಡಿ ತುಕಾಲಿ ಸಂತೋಷ್ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ:ಕನ್ನಡ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದ ಯುವಕರ ಫೇವರೇಟ್ ನಟಿ ಪೂನಂ

ದೊಡ್ಮನೆ ಆಟ ಮುಗಿಯುತ್ತಿದ್ದಂತೆ ಇಶಾನಿ, ತುಕಾಲಿ ಸಂತು, ಡ್ರೋನ್ ಪ್ರತಾಪ್ ಅವರು ‘ಗಿಚ್ಚಿ ಗಿಲಿ ಗಿಲಿ-3’ ಕಾರ್ಯಕ್ರಮದಲ್ಲಿ ನಗಿಸಲು ಮತ್ತೆ ಟಿವಿ ಪರದೆಗೆ ಬರುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡ್ಯಾನ್ಸ್, ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಪ್ರತಾಪ್ ಗುರುತಿಸಿಕೊಂಡಿದ್ದರು. ಸಿಂಪಲ್‌ ಆಗಿ ಇರುತ್ತಿದ್ದ ಪ್ರತಾಪ್‌ ಏಕಾಎಕಿ ಮೇಕಪ್ ಮಾಡಿಕೊಂಡು ಕುಣಿದು ಕುಪ್ಪಳಿಸಿದ್ದು, ನೋಡಿ ತುಕಾಲಿ ಸಂತು ಕಂಗಾಲಾಗಿದ್ದಾರೆ. ಇದೇನಿದು ಈಗ ಬಂದಿರೋದು ಪ್ರತಾಪ್ ಅವರೇನಾ ಎಂದು ದಂಗಾಗಿ ನೋಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರುತಿ, ಸಾಧು ಕೋಕಿಲ, ಕೋಮಲ್ ಜಡ್ಜ್‌ಗಳಾಗಿ ಇದೇ ಫೆ.3ರಿಂದ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಶೋನ ನಿರಂಜನ್‌ ದೇಶಪಾಂಡೆ ನಿರೂಪಕರಾಗಿದ್ದಾರೆ.

ಬಿಗ್‌ ಬಾಸ್‌ಗೆ ಬರುವ ಮುನ್ನ ಪ್ರತಾಪ್‌ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದರು. ಟ್ರೋಲ್‌ಗಳಿಂದ ಸಖತ್‌ ಡ್ರೋನ್‌ ಪ್ರತಾಪ್‌ ವೈರಲ್‌ ಆಗಿದ್ದರು. ಆದರೆ ಈಗ ದೊಡ್ಮನೆಯಲ್ಲಿ ಪ್ರತಾಪ್‌ ಆಟ, ವ್ಯಕ್ತಿತ್ವ ಅರಿತ ಮೇಲೆ ಅವರಿಗೆ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಹಾಗಾಗಿ ಈಗ ನಟನೆಯ ಮೂಲಕ ಹೊಸ ಇನ್ಸಿಂಗ್ಸ್‌ ಶುರು ಮಾಡಿದ್ದಾರೆ.