ಕೋಲಾರ: ನೀತಿ ಪಾಠ ಹೇಳುವ ಕೆಲ ಕಾಂಗ್ರೆಸ್ ಶಾಸಕರಿಗೆ ಖಾವಿ ಒಂದಿಲ್ಲ, ಖಾವಿ ಇದ್ದಿದ್ದರೆ ಸ್ವಾಮಿ, ಸ್ವಾಮಿ ಎನ್ನಬಹುದಿತ್ತು ಎಂದು ಸಚಿವ ಡಾ.ಕೆ ಸುಧಾಕರ್ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾವಿ ಹಾಕಿಕೊಳ್ಳದೆ ನೀತಿ ಹೇಳುವ ಅವರು ಎಂಎಲ್‍ಸಿ ಚುನಾವಣೆಗೆ ಜೆಡಿಎಸ್ ಹಾಗೂ ಎಂಪಿ ಚುನಾವಣೆಗೆ ಬಿಜೆಪಿ ಬೆಂಬಲ ನೀಡಿ ಈಗ ನೀತಿ ಪಾಠ ಮಾಡುತ್ತಾರೆ ಎಂದು ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ಬದಲಾವಣೆ ಅವಶ್ಯಕತೆ ಇದೆ: ಮಧು ಬಂಗಾರಪ್ಪ

ಕಳೆದ ಬಾರಿ ಆಯ್ಕೆಯಾಗಿದ್ದ ಪರಿಷತ್ ಸದಸ್ಯರನ್ನು ಬೂದು ಕನ್ನಡಿ ಹಾಕಿ ಹುಡುಕಿದರು ಕಾಣಿಸುತ್ತಿಲ್ಲ. ಈ ಚುನಾವಣೆಯಲ್ಲಿ ಜನರು ನಮ್ಮನ್ನು ನಂಬುತ್ತಾರೆ ನಮ್ಮ ಆಶಯ ಸ್ಪಷ್ಟವಾಗಿದೆ, ನಾವು ನುಡಿದಂತೆ ನಡೆದುಕೊಳ್ಳುತ್ತೇವೆ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ರಮೇಶ್ ಕುಮಾರ್ ಸಿಎಜೆ ವರದಿಯಲ್ಲಿ 500 ಕೋಟಿ ಭ್ರಷ್ಟಾಚಾರವಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ ಅದನ್ನು ಚರ್ಚೆ ಮಾಡಬೇಕು, ನನ್ನ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಲೈನ್ ಸಿಎಜೆ ವರದಿಯಲ್ಲಿ ಬಂದಿಲ್ಲ, ರಾಜಕೀಯ ದುರುದ್ದೇಶದಿಂದ ಇವರು ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಪುಟಿನ್ ಭಾರತಕ್ಕೆ ಆಗಮನ – ವಾಯು ರಕ್ಷಣಾ ವ್ಯವಸ್ಥೆಯ ವಿಶೇಷತೆ ಏನು? ಎಷ್ಟು ಶಕ್ತಿಶಾಲಿ?
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಶೇ.100 ರಷ್ಟು ಜಿಲ್ಲೆಗೆ ಒಳ್ಳೆಯ ಕೆಲಸ ಮಾಡುತ್ತೇನೆ. ಅಲ್ಲದೆ ನನ್ನ ಅವಧಿಯಲ್ಲಿ ಒಂದಷ್ಟು ಜಿಲ್ಲೆಯಲ್ಲಿ ಅಚ್ಚಳಿಯದಂತೆ ಇರುವ ಕೆಲಸಗಳನ್ನು ಮಾಡುತ್ತೇನೆ ಎಂದರು.

Leave a Reply