ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ್

ಬೆಂಗಳೂರು: ಓಮಿಕ್ರಾನ್ ರೂಪಾಂತರಿ ವೈರಸ್ ಈಗ ನಮ್ಮ ದೇಶದಲ್ಲೂ ಇರಬಹುದು. ಟೆಸ್ಟಿಂಗ್ ಮೂಲಕವೇ ಅದು ತಿಳಿಯಬೇಕಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಅನೇಕ ದೇಶಗಳಲ್ಲಿ ಕಾಣಿಕೊಂಡಿರುವ ಈ ರೂಪಾಂತರಿ ವೈರಸ್ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲಿದೆ. ಇದು ಹೇಗೆ ಮಾರಕ ಎನ್ನುವುದು ಈಗಾಗಲೇ ತಿಳಿಸುವುದು ಕಷ್ಟಕರ ವಿಚಾರವಾಗಿದೆ.

ನಮ್ಮ ದೇಶವೂ ಸಹ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಜವಾಬ್ದಾರಿ ಜೊತೆಗೆ ಇದರಲ್ಲಿ ಜನರ ಜವಾಬ್ದಾರಿಯೂ ಹೆಚ್ಚಾಗಿದೆ. ಜನ ಮಾಸ್ಕ್ ಇಲ್ಲದೇ ಹೊರ ಬರಲೇ ಬಾರದು, ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ಲೊ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ

ವ್ಯಾಕ್ಸಿನ್ ಪಡೆದರೆ ಕೊರೋನಾ ಬರುವುದಿಲ್ಲ ಅಂತ ಯಾರು ಹೇಳಿಲ್ಲ. ವ್ಯಾಕ್ಸಿನ್ ಪಡೆಯುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಲಿದೆ, ಇದು ಕೊರೊನಾದ ವಿರುದ್ಧ ಹೋರಾಟ ಮಾಡಲು ಸಹಕಾರ ನೀಡಲಿದೆ. ಅದಕ್ಕಾಗಿ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಬೇಕು, ಜನ ವ್ಯಾಕ್ಸಿನ್ ಪಡೆಯದೇ ಹೋದರೆ ನಮ್ಮ ದೇಶಕ್ಕೂ ಕೊರೊನಾ ಹೆಚ್ಚು ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಫ್ರಂಟ್ ಲೈನ್ ವಾರಿಯರ್ಸ್‌ಗೆ ಮೂರನೇ ಡೋಸ್ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಬರೀ ಫ್ರೆಂಟ್ ಲೈನ್ ವರ್ಕರ್ಸ್ ಮಾತ್ರವಲ್ಲ, ಯಾರಿಗೆಲ್ಲಾ ಆರೋಗ್ಯ ಸಮಸ್ಯೆ ಇದೆಯೋ ಅವರಿಗೂ ಮೂರನೇ ಡೋಸ್ ನೀಡುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಆತಂಕದ ನಡುವೆ ಓಪಿಡಿ ಬಂದ್‌ ಮಾಡಿ ವೈದ್ಯರಿಂದ ಪ್ರತಿಭಟನೆ

ಜಾತ್ರೆ, ದೇವರ ಉತ್ಸವ ಹಾಗೆಯೇ ಹೊಸ ವರ್ಷದ ಆಚರಣೆ ಮತ್ತು ಕ್ರಿಸ್ ಮಸ್ ಹಬ್ಬದ ಆಚರಣೆಗೆ ಬ್ರೇಕ್ ಹಾಕಬೇಕಾಗಿದೆ. ಸರ್ಕಾರ ಇದರ ಬಗ್ಗೆ ಹೆಚ್ಚಿನ ಟಫ್ ರೂಲ್ಸ್ ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *