ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

ಚಂಡೀಗಡ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸೊಸೆಯ ಆರೋಪದ ಅವಮಾನ ತಾಳಲಾರದೆ ಬೆಂಕಿ ಹಚ್ಚಿಕೊಂಡು ಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

60 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸೊಸೆ ಮಾಡಿದ ಸುಳ್ಳು ವರದಕ್ಷಿಣೆ ಆರೋಪದಿಂದ ಅವಮಾನಗೊಂಡಿದ್ದರು. ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳಂತೆ ನೋಡಿಕೊಳ್ಳುತ್ತಿದ್ದ ಸೊಸೆ ವರದಕ್ಷಿಣೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡುತ್ತೇವೆಂದು ಹೇಳಿದ್ದನ್ನು ಸಹಿಸಲಾಗದೆ ಆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಕೊನೆಗೂ ಮೌನ ಮುರಿದ ನಟಿ ರಾಗಿಣಿ

ಒಂದೂವರೆ ವರ್ಷದ ಹಿಂದೆ ಅವರ ಮಗನಿಗೆ ಮದುವೆಯಾಗಿತ್ತು. 6 ತಿಂಗಳ ಮಗಳು ಕೂಡ ಇದ್ದಾಳೆ. ಮದುವೆಯಾದ ಕೂಡಲೇ ಅತ್ತೆ-ಮಾವನ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ್ದ ಸೊಸೆ ತನ್ನ ಗಂಡನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಳು. ಇದೇ ವಿಷಯಕ್ಕೆ ಅತ್ತೆ-ಮಾವ ಹಾಗೂ ಸೊಸೆಯ ನಡುವೆ ಜಗಳವಾಗುತ್ತಿತ್ತು. ಇತ್ತೀಚೆಗೆ ಆಕೆಯ ಪೋಷಕರು ಆಕೆಯ ಅತ್ತೆ-ಮಾವನ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

60 ವರ್ಷದ ಆ ವ್ಯಕ್ತಿಗೆ ಸೊಸೆ ಹಾಗೂ ಆಕೆಯ ಮನೆಯವರು ಬೆದರಿಕೆಯೊಡ್ಡಿದ್ದರು. ಹಾಗೇ ಹೊಡೆದು ದೈಹಿಕ ಹಿಂಸೆಯನ್ನೂ ಮಾಡಿದ್ದರು. ಅಲ್ಲದೆ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದರು. ಇದರಿಂದ ಆತಂಕಗೊಂಡಿದ್ದ ಅವರು ಈ ಸುಳ್ಳು ಕೇಸ್‍ನಿಂದ ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಹೆಂಡತಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನ ಮೆಚ್ಚಿಸಲು ಕಾಂಗ್ರೆಸ್ ನಾಯಕರನ್ನು ಸಿ.ಟಿ ರವಿ, ಯತ್ನಾಳ್ ಬೈಯುತ್ತಿದ್ದಾರೆ: ಶ್ರೀನಿವಾಸ್ ಬಿ.ವಿ.

ಸೊಸೆಯ ಮನೆಯವರು ಬ್ಲಾಕ್‍ಮೇಲ್ ಮಾಡಿದ್ದರಿಂದ ನೊಂದಿದ್ದ ವ್ಯಕ್ತಿ ಮನೆಗೆ ಬಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹೆಂಡತಿ ತಕ್ಷಣ ಪಕ್ಕದ ಮನೆಯವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸುಟ್ಟ ಗಾಯಗಳಿಂದ ಅವರು ಸಾವನ್ನಪ್ಪಿದ್ದರು.

Comments

Leave a Reply

Your email address will not be published. Required fields are marked *