ನಿಮ್ಮ ಕಠಿಣ ಶ್ರಮಕ್ಕೆ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ: ರಾಹುಲ್ ಗಾಂಧಿ

ನವದೆಹಲಿ: 10 ನೇ ತರಗತಿಯ ಸಿಬಿಎಸ್‍ಇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಕಳಪೆ, ಅಸಹ್ಯಕರವಾಗಿತ್ತು. ಇದು ಯುವಕರ ನೈತಿಕತೆ ಮತ್ತು ಭವಿಷ್ಯವನ್ನು ಹತ್ತಿಕ್ಕಲು ಆರ್‍ಎಸ್‍ಎಸ್, ಬಿಜೆಪಿ ಮಾಡಿರುವ ವಿಶಿಷ್ಟವಾದ ಕುತಂತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಹಿಳೆಯರ ವಿಮೋಚನೆಯು ಪೋಷಕರಿಗೆ ಮಕ್ಕಳ ಮೇಲಿರುವ ಅಧಿಕಾರವನ್ನು ನಾಶಪಡಿಸುತ್ತಿದೆ ಎಂಬ ವಾಕ್ಯ ಕುರಿತಂತೆ ಟ್ವೀಟ್ ಮಾಡಿರುವ ಅವರು, ಶನಿವಾರ ನಡೆದ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಳ ಕಷ್ಟಕರವಾಗಿತ್ತು ಮತ್ತು ನೀಡಿದ್ದ ಪ್ರಶ್ನೆ ಸಹ ಬಹಳ ಅಸಹ್ಯಕರವಾಗಿತ್ತು ಎಂದಿದ್ದಾರೆ.  ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

ಆರ್‍ಎಸ್‍ಎಸ್ – ಬಿಜೆಪಿ ಯುವಕರ ಸ್ಥೈರ್ಯ ಮತ್ತು ಭವಿಷ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ. ಇದರಲ್ಲಿ ಧರ್ಮಾಂಧತೆ ಬರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

ಈ ಮುನ್ನ ಪ್ರಿಯಾಂಕಾ ವಾದ್ರಾ ಅವರು ಕೂಡ, ಮಹಿಳೆಯರ ಮೇಲಿನ ಹಿಮ್ಮುಖ ದೃಷ್ಟಿಕೋನವನ್ನು ಅನುಮೋದಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಕ್ಕಳಿಗೆ ನಾವು ಈ ರೀತಿ ಪ್ರೇರಣೆ ನೀಡುತ್ತಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ.

Comments

Leave a Reply

Your email address will not be published. Required fields are marked *