ಒಂದೇ ಕಾಮಗಾರಿಗೆ ಡಬಲ್ ಬಿಲ್ – ಹೂವಿನಹಡಗಲಿಯಲ್ಲಿ ಪರಮೇಶ್ವರ್ ನಾಯ್ಕ್ ದರ್ಬಾರ್

ಬಳ್ಳಾರಿ: ಅಲ್ಲಿರೋದು ಒಂದೆ ರೋಡ್, ಆದ್ರೆ ಆ ಒಂದು ರೋಡ್ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಾವತಿ ಆಗಿದೆ. ಇದು ಹೂವಿನಹಡಗಲಿಯ ಪುರಸಭೆಯಲ್ಲಿ ನಡೆದ ಅವ್ಯವಹಾರ.

ಮಾಜಿ ಸಚಿವ ಪರಮೇಶ್ವರ ನಾಯ್ಕ್ ಅಧಿಕಾರವಧಿಯಲ್ಲಿ ಆದ ಅವ್ಯವಹಾರಗಳು ಇದೀಗ ಒಂದೊಂದೇ ಬಯಲಾಗುತ್ತಿವೆ. ಹೂವಿನಹಡಗಲಿಯಲ್ಲಿ ಒಂದೇ ರೋಡ್ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಾವತಿಯಾಗಿರೋದು ದಾಖಲೆಗಳ ಮೂಲಕ ಬೆಳಕಿಗೆ ಬಂದಿದೆ.

ಪಿಟಿ ಪರಮೇಶ್ವರ ನಾಯ್ಕ್ ಸಚಿವರಾಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ಹೂವಿನಹಡಗಲಿಯ ರಾಜೀವನಗರದಿಂದ ನಜೀರ್ ನಗರದವರೆಗೆ ರಸ್ತೆ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿಗೆ ಪುರಸಭೆಯಿಂದ ಮೆಟಲಿಂಗ್ ಮಾಡಲು 5.18 ಲಕ್ಷ ಹಾಗೂ ಸಿಸಿ ರಸ್ತೆ, ಚರಂಡಿಗಾಗಿ 8.17 ಲಕ್ಷ ಬೋಗಸ್ ಬಿಲ್ ಪಡೆಯಲಾಗಿದೆ. ಇದೇ ಕಾಮಗಾರಿಯನ್ನು ಎಚ್‍ಕೆಡಿಬಿ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯ್ತಿ ಮೂಲಕ ಮಾಡಲಾಗಿದೆ ಎಂದು ತೋರಿಸಿ ಬರೋಬ್ಬರಿ 53.49 ಲಕ್ಷ ರೂಪಾಯಿ ಹಣ ಕಿತ್ತಿದ್ದಾರೆ.

ಇನ್ನೂ ವಿಚಿತ್ರ ಅಂದ್ರೆ ಈ ಕಾಮಗಾರಿ ನಡೆದಿರೋದು ಖಾಸಗಿ ಲೇಔಟ್‍ನಲ್ಲಿ ಅಂದ್ರೆ ನಂಬಲೇಬೇಕು. ಅಧಿಕಾರ ದುರುಪಯೋಗ ಮಾಡ್ಕೊಂಡ ಪರಮೇಶ್ವರ ನಾಯ್ಕ್ ಪುರಸಭೆ ಅಧಿಕಾರಿಗಳ ಜೊತೆಗೂಡಿ ಈ ಲೂಟಿ ನಡೆಸಿರೋದು ದಾಖಲೆಗಳ ಸಮೇತ ಬೆಳಕಿಗೆ ಬಂದಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ತನಿಖೆ ನಡೆಸಿದ್ರೆ ಒಂದೇ ರೋಡ್‍ಗೆ ಎರಡು ಬಿಲ್ ಪಾವತಿ ಮಾಡಿ ಹಣ ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

Comments

Leave a Reply

Your email address will not be published. Required fields are marked *