ರಾಜ್ಯದಲ್ಲಿ ಮೋದಿ, ಬಿಜೆಪಿ ಅಲೆಯಿಲ್ಲ- ಲೋಕಲ್ ವಾರ್ ನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಜಯಮಾಲಾ

ಉಡುಪಿ: ರಾಜ್ಯದಲ್ಲಿ ಯಾವ ಅಲೆಯೂ ಇಲ್ಲ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆ-ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿರಬಹುದು. ರಾಜ್ಯದಲ್ಲಿ ಈಗ ಯಾವ ಅಲೆಯೂ ಇಲ್ಲ ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.

ತಿಂಗಳಾಂತ್ಯಕ್ಕೆ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆ ಹಿನ್ನೆಲೆಯಲ್ಲಿ ಮತಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಉಡುಪಿಯಲ್ಲಿ ಒಂದು ನಗರಸಭೆ, ಎರಡು ಪುರಸಭೆ ಒಂದು ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆಯಲಿದೆ. ಹೀಗಾಗಿ ಸಚಿವೆ ಜಯಮಾಲಾ ಡೋರ್ ಟು ಡೋರ್ ಕ್ಯಾಂಪೇನ್ ಶುರು ಮಾಡಿದ್ದಾರೆ. ಉಡುಪಿಯ ನಗರಸಭೆ ವಾರ್ಡ್ ಗಳಿಗೆ ಜಯಮಾಲಾ ಭೇಟಿ ನೀಡಿ ಮತಯಾಚನೆ ಮಾಡಿದರು.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಜಯಮಾಲಾ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಬಳಿಕ ನಾನು ಸ್ಟಾರ್ ಕ್ಯಾಂಪೇನರ್ ಅಲ್ಲ, ಕಾಂಗ್ರೆಸ್ ನ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯ ಸ್ಟಾರ್ ಕ್ಯಾಂಪೇನರ್. ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಹಿಂದಿನ ಸರ್ಕಾರದ ಯೋಜನೆಗಳನ್ನು, ಈಗಿನ ಸಮ್ಮಿಶ್ರ ಸರ್ಕಾರ ಕೆಲಸಗಳನ್ನು ಕಂಡು ಜನ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾರೆ ಅಂತ ಹೇಳಿದರು. ರೈತರ ಸಾಲಮನ್ನಾ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ನೆರೆ ಬಂದಿದ್ದು, 25 ಕೋಟಿ ನೆರೆ ಪರಿಹಾರ ಈಗಾಗಲೇ ದೊರಕಿದೆ. ಸರ್ಕಾರಕ್ಕೆ 75 ಕೋಟಿಗಾಗಿ ಬೇಡಿಕೆ ಇಟ್ಟಿದ್ದೇವೆ. ಸಮ್ಮಿಶ್ರ ಸರ್ಕಾರ ಜನರ ಪರವಾಗಿದೆ ಅನ್ನೋದು ನಮಗೆ ಹೆಮ್ಮೆ. ಬಿಜೆಪಿಯವರು ಏನೂ ಕೆಲಸ ಮಾಡದೆ ಮತ ಕೇಳ್ತಾರೆ. ನಾವು ಕೆಲಸ ಮಾಡಿ ಮತ ಕೇಳ್ತೀವಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಇಡೀ ರಾಜ್ಯದಲ್ಲಿ ಅಧಿಕಾರ ಸಿಲಿದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *