ಮಂಡ್ಯ: ಯಾರೂ ಹಸಿದು ಮಲಗಬಾರದು ಎಂದು ಅನ್ನಭಾಗ್ಯ (Annabhagya) ಅಕ್ಕಿ ಕೊಟ್ಟವರು ಯಾರು? ಕೇಂದ್ರದ ಅಸಹಕಾರದ ನಡುವೆಯೂ ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಿದ್ದೇವೆ. ಬಡವರಿಗೆ ಅಕ್ಕಿ ಕೊಡದ ಬಿಜೆಪಿ (BJP), ಜೆಡಿಎಸ್‌ಗೆ (JDS) ಮತ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮಳವಳ್ಳಿಯಲ್ಲಿ (Malavalli) ನಡೆದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಕಾರ ಮಾಡಿದವರನ್ನ ಮರೆಯುತ್ತೀರ? 155 ಕೋಟಿ ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಹಿಂದೆ ಯಾರಾದ್ರೂ ಮಾಡಿದ್ದಾರಾ? ಬಿಜೆಪಿ, ಹೆಚ್‌ಡಿಕೆ, ದೇವೇಗೌಡರು ಮಾಡಿದ್ರಾ? ಇದನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ ಎಂದರು. ಇದನ್ನೂ ಓದಿ: ಡಿಸಿಎಂ ಹೊಗಳಿದ ಎಸ್‍ಟಿಎಸ್‍ಗೆ ವೇದಿಕೆಯಲ್ಲೇ ಮುನಿರತ್ನ ತಿರುಗೇಟು

ಜಾತಿವಾದಿಗಳ ಜೊತೆ ಸೇರಿಸೋ ಇವರಿಗೆ ವೋಟ್ ಹಾಕಬೇಕಾ? ಮಂಡ್ಯ (Mandya) ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ. ಕಾಂಗ್ರೆಸ್ (Congress) ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಏನಪ್ಪ ಚಲುವರಾಯಸ್ವಾಮಿ, ರಮೇಶ್, ಉದಯ್, ರವಿಕುಮಾರ್ ಇದು ನಿಮ್ಮೆಲ್ಲರ ಜವಾಬ್ದಾರಿ. ನಾನು ಹಿಂದೆ ಸಿಎಂ ಆಗಿದ್ದಾಗ, 165 ಭರವಸೆ ಕೊಟ್ಟಿದ್ದೆವು. ಅದರಲ್ಲಿ 155 ಭರವಸೆ ಈಡೇರಿಸಿದ್ದೆವು. ನಮ್ಮ ಕಾರ್ಯಕರ್ತರು ಬಿಜೆಪಿ-ಜೆಡಿಎಸ್ ರೀತಿ ಸುಳ್ಳು ಹೇಳಬೇಡಿ. ಜನರಿಗೆ ಸತ್ಯ ಹೇಳಿ. ಜನ ನಮ್ಮ ಕೈ ಬಿಡುವುದಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ದೇವೇಗೌಡರು ಸಿಎಂ ಆಗಿದ್ದರು. ಬಡವರಿಗೆ ನಿಮ್ಮ ಕೊಡುಗೆ ಏನು? ಜನ ಸುಮ್ಮನೆ ನಿಮಗೆ ವೋಟ್ ಹಾಕಬೇಕಾ? ಬಿಜೆಪಿ ಅವರ ಕೊಡುಗೆ ಏನು? ಹಿಂದೆ ನಾನು ನರೇಂದ್ರ ಸ್ವಾಮಿ ಅವರಿಗೆ ಎಲ್ಲಾ ಕೆಲಸ ಮಾಡಿಕೊಟ್ಟಿದ್ದೆ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?
ನಮ್ಮ ದೇಶದ ಪ್ರಧಾನ ಮಂತ್ರಿ ಇದ್ದಾರಲ್ಲ, ಅವರು ಬರೀ ಸುಳ್ಳನ್ನೇ ಹೇಳೋದು. ಬಿಜೆಪಿ ಸುಳ್ಳಿನ ಪಾರ್ಟಿ, ಬಿಜೆಪಿಯ ಅನರ್ಥನಾಮ ಸುಳ್ಳು. 100 ರೂ. ತೆರಿಗೆ ಕಲೆಕ್ಟ್ ಮಾಡಿ ಕೊಟ್ಟರೆ ನಮಗೆ ವಾಪಸ್ ಕೊಡೋದು ಕೇವಲ 13 ರೂ. ಕರ್ನಾಟಕ ಇಡೀ ದೇಶದಲ್ಲಿ ಎರಡನೇ ಅತಿದೊಡ್ಡ ತೆರಿಗೆ ಕಟ್ಟುವ ರಾಜ್ಯ. ಆದರೂ ನಮಗೆ ನಮ್ಮ ಪಾಲು ಕೊಡುತ್ತಿಲ್ಲ. ನಮಗೆ ಅನ್ಯಾಯ ಆಗುತ್ತಿದೆ. ನಮಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಇದು ಕನ್ನಡಿಗರಿಗೆ ಮಾಡಿರುವ ಅನ್ಯಾಯ ಅಲ್ವಾ? ಇಂಥವರಿಗೆ ನೀವು ವೋಟ್ ಹಾಕ್ತಿರಾ? ಲೋಕಸಭಾ ಚುನಾವಣೆಯಲ್ಲಿ (Lok Sabha Election) ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ದೇಶದ ಸಂಪತ್ತು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ; ಸಿದ್ದರಾಮಯ್ಯಗೆ ಮಹಾ ಅಧಿವೇಶನದಲ್ಲಿ ಅಮಿತ್ ಶಾ ತಿರುಗೇಟು
ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ದೇವೇಗೌಡರು (HD Deve Gowda) ಹೇಳಿದ್ದರು. ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಮಿಸ್ಟರ್ ದೇವೇಗೌಡರೇ ಕುಮಾರಸ್ವಾಮಿಯನ್ನು ನಾನೇ ಬಿಜೆಪಿಗೆ ಸೇರಿಕೋ ಅಂದೆ ಎನ್ನುತ್ತೀರಿ. ದಯಾಮಾಡಿ ನಿಮ್ಮ ಜೆಡಿಎಸ್‌ನಲ್ಲಿನ ಜ್ಯಾತ್ಯತೀತ ಎನ್ನುವ ಪದ ತೆಗೆದುಹಾಕಿ. ಅದನ್ನು ಉಳಿಸಿಕೊಳ್ಳುವ ಯಾವುದೇ ನೈತಿಕತೆ ನಿಮಗಿಲ್ಲ. ನಿಮ್ಮದೊಂದು ರಾಜಕೀಯ ಪಕ್ಷ. ನೀವು 19 ಸ್ಥಾನಗಳನ್ನ ಪಡೆದಿದ್ದೀರಿ. ನಾವು 136 ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿಯವರು ಡೋಂಗಿ ತನದ ಮಾತುಗಳನ್ನು ಆಡುತ್ತಿದ್ದಾರೆ. ನಾವು 28 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಾರೆ, ಅದು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಈ ಬಾರಿ ಕನಿಷ್ಠ 20 ಸ್ಥಾನ ಗೆದ್ದೇಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆಶಿ, ಡಿ.ಕೆ ಸುರೇಶ್‍ಗೆ ಎಸ್.ಟಿ ಸೋಮಶೇಖರ್ ಅಭಿನಂದನೆ
ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ನೀವು ಪುಕ್ಕಸಟ್ಟೆ ಕೊಡಬೇಡಿ ಹಣ ಕೊಡುತ್ತೇವೆ ಎಂದೆವು. ಆದರೂ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡದ ಈ ಬಿಜೆಪಿಗೆ ವೋಟ್ ಹಾಕುತ್ತೀರಾ? ಈಗ ಕುಮಾರಸ್ವಾಮಿ, ಅಶೋಕ್, ಜೊತೆಯಾಗಿಲ್ವಾ ಎಂದು ಲೇವಡಿ ಮಾಡಿದರು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದರು. ಇದು ವಿಫಲ ಆಗುತ್ತೆ, ಲೋಕಸಭಾ ಚುನಾವಣೆ ಆದಮೇಲೆ ನಿಲ್ಲಿಸುತ್ತಾರೆ ಎಂದರು. ಆದರೆ ಮೊನ್ನೆ ಬಜೆಟ್ ಮಂಡನೆ ಮಾಡಿದ್ದೇನೆ. 52 ಸಾವಿರ ಕೋಟಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ಮಿಸ್ಟರ್ ಅಶೋಕಾ ಬಜೆಟ್ ಪುಸ್ತಕ ಓದಿಕೊಳ್ಳಪ್ಪ. ಮಿಸ್ಟರ್ ಬೊಮ್ಮಾಯಿ ಬಜೆಟ್ ಪುಸ್ತಕ ಓದಪ್ಪ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಟಾಪ್ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?
ಇಂದು ಮಳವಳ್ಳಿ ಕ್ಷೇತ್ರದಲ್ಲಿ ನರೇಂದ್ರ ಸ್ವಾಮಿ ನೇತೃತ್ವದಲ್ಲಿ 482 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನರೇಂದ್ರ ಸ್ವಾಮಿ ಶಾಸಕರಾಗಿ ಮಳವಳ್ಳಿ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಇದಕ್ಕೆ ಇವತ್ತಿನ ಕಾರ್ಯಕ್ರಮ ಸಾಕ್ಷಿ. ನರೇಂದ್ರ ಸ್ವಾಮಿ ಎಲ್ಲಾ ಮಂತ್ರಿಗಳ ಜೊತೆ ಚೆನ್ನಾಗಿದ್ದಾರೆ. ಇದನ್ನು ಉಪಯೋಗಿಸಿಕೊಂಡು ಮಳವಳ್ಳಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ಪಡೆದಿದ್ದಾರೆ. ನೀವೆಲ್ಲಾ ನರೇಂದ್ರ ಸ್ವಾಮಿ ಅವರನ್ನು ಮಂತ್ರಿ ಮಾಡಿ ಎಂದು ಕೇಳುತ್ತಿದ್ದೀರಿ. ಆದರೆ ಮಂತ್ರಿ ಸ್ಥಾನ ಖಾಲಿ ಇಲ್ಲ. ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆದಾಗ ಅವರಿಗೂ ಅವಕಾಶ ಸಿಗುತ್ತದೆ. ಆದರೆ ಅದನ್ನು ಕೇಳುವ ಸಮಯ ಇದಲ್ಲ ಎಂದು ನರೇಂದ್ರ ಸ್ವಾಮಿ ಅಭಿಮಾನಿಗಳಿಗೆ ಸಿಎಂ ಕಿವಿಮಾತು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಸೇರೋದು ಸರಿಯಲ್ಲ: ಪರಮೇಶ್ವರ್
ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸರ್ಕಾರ ಬಂದಿದೆ. ಮಳವಳ್ಳಿ ಕ್ಷೇತ್ರದ ಜನ ನಾನು ಯಾವಾಗ ಹೇಳಿದರೂ ನಮಗೆ ಆಶೀರ್ವಾದ ಮಾಡುತ್ತೀರಿ. ನನ್ನ ಮೇಲೆ ವಿಶೇಷ ಪ್ರೀತಿ ಇಟ್ಟಿದ್ದೀರಿ. ಮಳವಳ್ಳಿ ಕ್ಷೇತ್ರ ನನ್ನ ಕ್ಷೇತ್ರ ಇದ್ದಹಾಗೆ. ಬಿಜೆಪಿ-ಜೆಡಿಎಸ್‌ನವರು ಎಷ್ಟೇ ಆಮಿಷ ಒಡ್ಡಿದರೂ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೀರಿ. ಕಳೆದ ಚುನಾವಣೆಯಲ್ಲಿ ನಾವು ಅನೇಕ ಭರವಸೆ ಕೊಟ್ಟಿದ್ದೆವು. ಅದರ ಅನುಗುಣವಾಗಿ ಇಂದು 470 ಕೋಟಿ ಅಂದಾಜಿನ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇವೆ. ಅಲ್ಲದೇ ನರೇಂದ್ರ ಸ್ವಾಮಿ ಕೆಲ ಮನವಿ ಕೊಟ್ಟಿದ್ದಾರೆ. ನಾನು ಮುಂದೆ ಆ ಮನವಿ ಸ್ವೀಕಾರ ಮಾಡಿ ಅನುದಾನ ಕೊಡುವ ಕೆಲಸ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ನಾವು 5 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ-ಜೆಡಿಎಸ್ ರೀತಿಯಲ್ಲಿ ಕೊಟ್ಟ ಮಾತಿಗೆ ನಾವು ತಪ್ಪಲ್ಲ. ನಾವು ಕೊಟ್ಟ ಮಾತನ್ನು 100ಕ್ಕೆ 100ರಷ್ಟು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ಖಾತೆಗಳನ್ನ ಬಿಜೆಪಿ ಸೀಜ್ ಮಾಡಿದೆ: ಪರಮೇಶ್ವರ್
