ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ

ಯಾದಗಿರಿ: ಕೋವಿಡ್ ಲಸಿಕೆ ತೆಗೆದುಕೊಳ್ಳಿ ಅಂದ್ರೆ ಈ ಜಿಲ್ಲೆಯ ಜನರ ಮೈ ಮೇಲೆ ದೇವರು ಬಂದು ಬಿಡುತ್ತೆ. ಇವರೆಲ್ಲಾ ದೇವರ ಸ್ವರೂಪ ಅಂತೆ, ಇವರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ರೆ ಅಧಿಕಾರಿಗಳು ಊರ ದಾಟಲ್ಲವಂತೆ. ಇನ್ನೂ ನಾನೇ ದೇವಿ ಸ್ವರೂಪ ನನಗ್ಯಾಕೆ ಸೂಜಿ, ಡಬ್ಬಣ ಅಂತ ಕೋವಿಡ್ ಲಸಿಕೆ ನೀಡಲು ಮನೆ ತೆರಳಿದ ಆರೋಗ್ಯ ಸಿಬ್ಬಂದಿಗೆ ಭಯ ಪಡಿಸುತ್ತಿದ್ದಾರೆ.

ಇಷ್ಟು ದಿನ ಲಸಿಕೆ ನೀಡಲು ತೆರಳಿದ ಅಧಿಕಾರಿಗಳ ಮೇಲೆ ಹಲ್ಲೆ, ದಬ್ಬಾಳಿಕೆ ಆಯಿತು, ಆರೋಗ್ಯ ಸಿಬ್ಬಂದಿ ನೋಡಿ ಎದ್ನೋ, ಬಿದ್ನೋ ಅಂತ ಓಡಿ ಹೋಗಿದ್ದು ಆಯ್ತು. ಇದೀಗ ಯಾದಗಿರಿ ಮಂದಿ ಹೊಸ ಒರಸೆಯನ್ನು ಶುರು ಮಾಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ದೇವರ ಹೆಸರಿನಲ್ಲಿ ಫುಲ್ ಹೈಡ್ರಾಮಾ ನಡೆಯುತ್ತಿದೆ. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್

ಮೈ ಮೇಲೆ ದೇವರು ಬಂದಂತೆ ನಟಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ವ್ಯಾಕ್ಸಿನ್ ಪಡೆಯರಿ ಅಂದ್ರೆ ಮೈಯಲ್ಲಿ ದೇವರು ಬಂದಿರೋ ತರಹ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಫುಲ್ ನಾಟಕವಾಡಿದ್ದಾರೆ. ಜಿಲ್ಲೆಯ ವಡಗೇರ ತಾಲೂಕಿನ ಹುಲಕಲ್ (ಜೆ) ಮತ್ತು ಗುರುಮಿಠಕಲ್ ತಾಲೂಕಿನ ಪುಟಪಾಕ್ ಗ್ರಾಮಗಳಲ್ಲಿ ಅಧಿಕಾರಿಗಳಿಗೆ ದೇವರ ಹೆಸರಲ್ಲಿ ಭಯ ಹುಟ್ಟಿಸಿದ್ದು ಮಾತ್ರವಲ್ಲದೆ ಹಲ್ಲೆಗೂ ಸಹ ಮುಂದಾಗಲಾಗಿದೆ. ಜನರ ಈ ವರ್ತನೆ ಕಂಡು ಆರೋಗ್ಯ ಸಿಬ್ಬಂದಿ ಫುಲ್ ಶಾಕ್ ಆಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಲಸಿಕೆ ಬಗ್ಗೆ ಮುಂದುವರಿದ ಮೌಢ್ಯತೆ – ಅಧಿಕಾರಿಗಳಿಗೆ ಕುಂಟು ನೆಪ ಹೇಳಿ ಎಸ್ಕೇಪ್

Comments

Leave a Reply

Your email address will not be published. Required fields are marked *