ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (siddaramaiah) ಅವರೇ ಮಂಡ್ಯದ (Mandya) ಕೆರಗೋಡು ಹನುಮಧ್ವಜ ತಂಟೆಗೆ ಬರಬೇಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಂಡ್ಯದ ಕೆರಗೋಡು ಹುನಮಧ್ವಜ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆಂಜನೇಯನಿಗೆ ಬೆಂಕಿ ಹಚ್ಚಿದ ರಾವಣನ ಕಥೆ ಏನಾಯ್ತು ಲಂಕಾ ದಹನವಾಯ್ತು. ಅದೇ ರೀತಿ ಸಿದ್ದರಾಮಯ್ಯನವರೇ ಹನುಮನ ತಂಟೆಗೆ ಬರಬೇಡಿ, ಸುಟ್ಟು ಹೋಗ್ತೀರಾ ಹುಷಾರ್ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಹನುಮನ ತಂಟೆಗೆ ಬರಬೇಡಿ. ಹನುಮನ ಬಾಲಕ್ಕೆ ಬೆಂಕಿ ಇಟ್ಟರೆ ನಿಮ್ಮ ಸರ್ಕಾರನೇ ಉಳಿಯಲ್ಲ. ಅಂತ ರಾವಣನೇ ಉಳಿಯಲಿಲ್ಲ, ನೀವು ಯಾವ ಲೆಕ್ಕ ಎಮದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಟಾಯ್ಲೆಟ್ ಕ್ಲೀನಿಂಗ್ – ಮುಖ್ಯಶಿಕ್ಷಕಿ ಅಮಾನತು

ಸಿದ್ದರಾಮಯ್ಯ ಎದೆಯಲ್ಲಿ ಟಿಪ್ಪು ಸುಲ್ತಾನ್ ಇದ್ದಾರೆ. ಆದರೆ ಬಾಯಲ್ಲಿ ಮಾತ್ರ ರಾಮ ಅಂತೀರಾ. ಹೃದಯದಿಂದ ರಾಮ ಅನ್ನಬೇಕು. ಎದೆ ಸೀಳಿದರೆ ಟಿಪ್ಪು ಸುಲ್ತಾನ್ ಕಾಣಿಸುತ್ತಾನೆ. ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ ಹಾಗಾಗಿ ಅವರು ಪ್ರಚಾರ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.  ಇದನ್ನೂ ಓದಿ: ಜನವರಿ ತಿಂಗಳ ಹುಂಡಿ ಎಣಿಕೆ- ರಾಯರ ಮಠದಲ್ಲಿ 4 ಕೋಟಿ 15 ಲಕ್ಷ ರೂ. ಸಂಗ್ರಹ