ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಸಚಿವ ಹೆಚ್‌.ಸಿ.ಮಹದೇವಪ್ಪ (H.C.Mahadevappa) ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ವಿಚಾರವಾಗಿ ನಾನು ನಿನ್ನೆಯೇ ಎಲ್ಲವನ್ನೂ ಹೇಳಿದ್ದೇನೆ. ಬಿಜೆಪಿ ಇರೋದೆ ಆರೋಪ ಮಾಡಲು. ಆದರೆ ಸತ್ಯಾಸತ್ಯತೆ ಇರಬೇಕಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಕೇಸನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ: ಡಿಕೆಶಿ

ಬಿಜೆಪಿ ಅವರದ್ದೂ ಕೇವಲ ಆರೋಪ ಅಷ್ಟೆ. ಅದಕ್ಕೆ ಎಸ್‌ಐಟಿ ಮಾಡಲಾಗಿದೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡಲಾಗುತ್ತದೆ. ಇಲ್ಲಿ ರಕ್ಷಣೆ ಮಾಡುವ ವಿಚಾರ ಯಾಕೆ ಬರುತ್ತದೆ. ಅದರಲ್ಲಿ ನಾಗೇಂದ್ರ ಅವರು ಇದ್ದಾರೋ ಇಲ್ವೋ ಗೊತ್ತಿಲ್ಲ. ಅದಕ್ಕಾಗಿಯೇ ತನಿಖೆಗೆ ವಹಿಸಿರೋದು. ಯಾರೆಲ್ಲಾ ಇದ್ದಾರೆ ಅನ್ನೋದು ಕೂಡ ತನಿಖೆಯಿಂದ ಹೊರ ಬರಲಿದೆ. ಎಲ್ಲಾ ಮೌಲ್ಯಯುತ ನಾಯಕರು ಮಾತಾಡ್ತಾ ಇದ್ದಾರೆ ಮಾತಾಡಲಿ. ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಸಿಎಂ, ಡಿಸಿಎಂ ನ್ಯಾಯಾಲಯಕ್ಕೆ ಹಾಜರಾದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಪಾಲನೆ ಮಾಡುವ ಜವಾಬ್ದಾರಿಯುತ ನಾಗರಿಕರು ಎಂದು ಸಾಬೀತು ಮಾಡಿದ್ದಾರೆ ಎಂದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ