ನನ್ನ ಮಗಳಿಗೆ ನೋವು ಕೊಡಬೇಡಿ- ಕೈಯಲ್ಲಿ ಬರೆದು ತಾಯಿ ಆತ್ಮಹತ್ಯೆಗೆ ಶರಣು

ನವದೆಹಲಿ: ಕೈಯಲ್ಲಿ ಡೆತ್ ನೋಟ್ ಬರೆದಿಟ್ಟು 37 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ದೆಹಲಿಯ ಟಿಗ್ರಿಯಲ್ಲಿ ಸೋಮವಾರ ನಡೆದಿದೆ.

ಮೃತ ಮಹಿಳೆಯನ್ನು ಲಕ್ಷ್ಮಿ ಗುಪ್ತ ಎಂದು ಗುರುತಿಸಲಾಗಿದೆ. ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಲಕ್ಷ್ಮಿ ಪತ್ತೆಯಾದ ಕೂಡಲೇ ಲಕ್ಷ್ಮಿ ಬಾವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಕೆಳಗಿಳಿಸಿದಾಗ ಆಕೆಯ ಕೈಯಲ್ಲಿ ನನ್ನ ಮಗಳ ಮನಸ್ಸನ್ನು ನೋಯಿಸಬೇಡಿ (Don’t Hurt My Daughter) ಎಂಬುದಾಗಿ ಬರೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಸ್ಪತ್ರೆಗೆ ತಲುಪಲು 7 ಕಿಮೀ ನಡೆದುಕೊಂಡು ಹೋದ ಗರ್ಭಿಣಿ – ಬಿಸಿಲಿನ ತಾಪಕ್ಕೆ ಸಾವು

ಲಕ್ಷ್ಮಿ ಮಗಳನ್ನು 2027ರ ಜನವರಿ 16ರಂದು ಜಿತೇಂದರ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕದಿಂದ ಜಿತೇಂದರ್ ಹಾಗೂ ಆತನ ಸಹೋದರ ಸೇರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಬಿ (ವರದಕ್ಷಿಣೆ ಕಿರುಕುಳ), 506 (ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.