ಕೋಲಾರ ಬೇಡ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ- ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ

ಶಿವಮೊಗ್ಗ: ನೀವು ಕೋಲಾರ (Kolar) ಕ್ಕೆ ಹೋಗಬೇಡಿ. ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗೆ ಸಚಿವ ಕೆ.ಎಸ್ ಈಶ್ವರಪ್ಪ ಸಲಹೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ, ಬಿಡ್ತಾರೋ ನಮಗೇನೂ ಸಂಬಂಧವಿಲ್ಲ. ಒಬ್ಬ ಜನಪ್ರತಿನಿಧಿ ಯಾವ ಕ್ಷೇತ್ರದಲ್ಲಿ ಗೆದ್ದಿರ್ತಾನೋ ಅದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತರೆ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರ್ಥ. ಅದು ಬಿಟ್ಟು ಈ ಸಾರಿ ಒಂದು ಕ್ಷೇತ್ರ, ಮುಂದಿನ ಸಾರಿ ಇನ್ನೊಂದು ಕ್ಷೇತ್ರ, ಅದಕ್ಕೂ ಮುಂದಿನ ವರ್ಷ ಇನ್ನೊಂದು ಕ್ಷೇತ್ರ ಹೀಗೆ ಮಾಡಿದರೆ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ, ಆ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂಬ ಅಭಿಪ್ರಾಯ ಬರುತ್ತೆ ಎಂದರು.

ಹಿಂದೆ ಚಾಮುಂಡೇಶ್ವರಿ ಕ್ಷೇತ್ರ (Chamundeshwari Constituency) ದಲ್ಲಿ ಯಾವುದೋ ಕಾರಣಕ್ಕೆ ಸೋತಿರಿ, ಯಾರ್ಯಾರಿಗೋ ಬೈದಿರಿ, ಕಾರ್ಯಕರ್ತರಿಗೆ ಕೆಲಸ ಮಾಡಿಲ್ಲ ಎಂದು ಬೈದಿರಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ತೋರಿಸಿ. ಅದು ಬಿಟ್ಟು ನನಗೆ ಅಲ್ಲಿ ಕರೀತಾರೆ, ಕೋಲಾರಕ್ಕೆ ಕರೀತಾರೆ ಅಂತ ಹೇಳಿದ್ರೆ. ಜನ ಕರೀತಾರೆ, ಮುಖ್ಯಮಂತ್ರಿ ಆಗಿದ್ದವರು ನಮಗೆ ಕೆಲಸ ಆಗಬಹುದು ಎಂಬ ನಂಬಿಕೆ, ವಿಶ್ವಾಸದ ಮೇಲೆ ಕರೆಯಬಹುದು. ಯಾವ ಕ್ಷೇತ್ರದಲ್ಲಿ ಚುನಾವಣೆ ಗೆದ್ದಿದ್ರೋ, ಯಾವ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ರೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅದು ಪ್ರಜಾಪ್ರಭುತ್ವದ ವ್ಯವಸ್ಥೆ. ಕೋಲಾರದ ಜನರಿಗೆ ಮಾತ್ರ ನಿಮ್ಮ ಪ್ರೀತಿನಾ..?, ಮುಖ್ಯಮಂತ್ರಿ ಆಗಿದ್ದವರು 224 ಕ್ಷೇತ್ರಗಳ ಜನರ ಪ್ರೀತಿ ಹೊಂದಿಲ್ವಾ ಎಂದು ಅವರು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ

ಒಬ್ಬ ಮುಖ್ಯಮಂತ್ರಿ ಆದವರು 224 ಕ್ಷೇತ್ರಗಳಲ್ಲಿ ಪ್ರೀತಿ ಇಟ್ಟುಕೊಳ್ಳಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ಆದರೂ ಚುನಾವಣೆಯಲ್ಲಿ ಅಲ್ಲಿ ಸೋತಿರಿ. ಸೋತ ಮೇಲೆ ಯಾಕೆ ಸೋತೆ ಅಂತ ಆ ಕ್ಷೇತ್ರದಲ್ಲಿ ನಿಂತು ಮತ್ತೆ ನೀವು ಗೆದ್ರೆ ಅವತ್ತು ನಿಮಗೆ ಜನನಾಯಕ ಅಂತಾರೆ. ಚಾಮುಂಡೇಶ್ವರಿಯಲ್ಲಿ ಸೋತೆ ಅಂತ ಬಾದಾಮಿಗೆ ಹೋಗೋದು. ಬಾದಾಮಿಯಲ್ಲಿ ಸೋಲ್ತೀನಂತ ಭಯದಲ್ಲಿ ಕೋಲಾರಕ್ಕೆ ಹೋಗೋದು ಎಂದು ವ್ಯಂಗ್ಯವಾಡಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *