ಬರಕ್‌ ಒಬಾಮಾ ಬಂಧಿಸುವ ಎಐ ಆಧಾರಿತ ವೀಡಿಯೋ ಹಂಚಿಕೊಂಡ ಟ್ರಂಪ್‌

– ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಮಾಜಿ ಅಧ್ಯಕ್ಷರಿಗೆ ಹಾಲಿ ಅಧ್ಯಕ್ಷ ಟಾಂಗ್‌

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಬರಕ್‌ ಒಬಾಮಾ (Donald Trump) ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವೀಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ, ‘ಒಬಾಮಾ ಕಾನೂನಿಗಿಂತ ಮೇಲಿದ್ದಾರೆ’ ಎಂದು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇದು ಅನೇಕ ಅಮೆರಿಕನ್ ರಾಜಕಾರಣಿಗಳು ‘ಯಾರೂ ಕಾನೂನಿಗಿಂತ ಮೇಲಲ್ಲ’ ಎಂದು ಹೇಳುವುದನ್ನು ಒಳಗೊಂಡಿದೆ. ನಂತರದ ಕ್ಲಿಪ್, ಒಬಾಮಾ ಅವರು ಒಮ್ಮೆ ಅಧ್ಯಕ್ಷರಾಗಿದ್ದ ಅದೇ ಕಚೇರಿಯಲ್ಲಿ ಇಬ್ಬರು ಎಫ್‌ಬಿಐ ಏಜೆಂಟ್‌ಗಳಿಂದ ಕೈಕೋಳ ಹಾಕಿರುವ AI ಆಧಾರಿತ ವೀಡಿಯೊಗೆ ಬದಲಾಗುತ್ತದೆ. ಬಂಧನದ ಸಮಯದಲ್ಲಿ ಟ್ರಂಪ್ ನಗುತ್ತಾ ಕುಳಿತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ – 40 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದ ಫ್ಲೈಟ್

ಈ ನಕಲಿ ವಿಡಿಯೋ ಒಬಾಮಾ ಜೈಲಿನೊಳಗೆ ಕಿತ್ತಳೆ ಬಣ್ಣದ ಜಂಪ್‌ಸೂಟ್ ಧರಿಸಿ ಕುಳಿತಿರುವ ದೃಶ್ಯಕ್ಕೆ ಕೊನೆಗೊಳ್ಳುತ್ತದೆ. ಒಬಮಾ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸಿದ ವಾರದ ನಂತರ ಈ ವೀಡಿಯೋ ಬಂದಿದೆ.

2016 ರ ಅಮೆರಿಕದ ಅಧ್ಯಕ್ಷೀಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮಾ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ, ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ – 17 ಮಂದಿ ಸಾವು