ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಶುಭಾಶಯ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಗೆ ಶುಭಾಶಯ ತಿಳಿಸಿದ್ದಾರೆ.

ಅಧಕ್ಷರಾದ ಟ್ರಂಪ್ ಸೋಮವಾರದಂದು ಜರ್ಮನಿಯ ಚ್ಯಾನ್ಸೆಲರ್ ಎಂಜೆಲಾ ಮಾರ್ಕೆಲ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಚುನಾವಣೆಯಲ್ಲಿ ಅವರ ಪಕ್ಷದ ಗೆಲುವಿಗೆ ಶುಭಾಶಯ ತಿಳಿಸಿದ್ದಾಗಿ ವೈಟ್‍ಹೌಸ್‍ನ ವಕ್ತಾರರರಾದ ಸೀನ್ ಸ್ಪೈಸರ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪಂಟರಾಜ್ಯ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 403 ಸೀಟ್‍ಗಳಲ್ಲಿ 312 ಸ್ಥಾನಗಳನ್ನ ಪಡೆದು ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಟ್ರಂಪ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ರು.

ಉತ್ತರಾಖಂಡ್‍ನಲ್ಲೂ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಗೋವಾ ಹಾಗೂ ಮಣಿಪುರದಲ್ಲಿ ಇತರೆ ಪಕ್ಷಗಳ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಆದ್ರೆ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.

ಅಮೆರಿಕಾದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಮೋದಿಯವರಿಗೆ ಟ್ರಂಪ್ ಕರೆ ಮಾಡಿರುವುದು ಇದು ಎರಡನೇ ಬಾರಿ. ಈ ಮೊದಲು ಜನವರಿಯಲ್ಲಿ ಕರೆ ಮಾಡಿದ್ದ ಟ್ರಂಪ್ ದಕ್ಷಿಣ ಮತ್ತು ಕೇಂದ್ರ ಏಷ್ಯಾ ದೇಶಗಳ ಭದ್ರತೆಯ ವಿಚಾರವಾಗಿ ಮೋದಿಯೊಂದಿಗೆ ಮಾತನಾಡಿಕೊಂಡಿದ್ದರು. ಎರಡೂ ರಾಷ್ಟ್ರಗಳ ನಾಯಕರು ದೇಶಕ್ಕೆ ಭೇಟಿ ನೀಡುವಂತೆ ಪರಸ್ಪರ ಆಹ್ವಾನ ನೀಡಿದ್ದರು.

Comments

Leave a Reply

Your email address will not be published. Required fields are marked *