ಶೀಘ್ರವೇ LPG ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ – ಗ್ಯಾಸ್‌ ಕಳ್ಳತನಕ್ಕೆ ಬೀಳುತ್ತೆ ಬ್ರೇಕ್‌

ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ (LPG Cylinders) ಶೀಘ್ರವೇ ಕ್ಯೂಆರ್‌ ಕೋಡ್‌ ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲ್‌ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ತಿಳಿಸಿದ್ದಾರೆ.

ಕಡಿಮೆ ಗ್ಯಾಸ್‌ ತುಂಬಿಸಿ ಸಿಲಿಂಡರ್‌ ವಿತರಿಸಿ ಗ್ರಾಹಕರಿಗೆ ಮೋಸ ಮಾಡುವವರನ್ನು ಸುಲಭವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಉಪಕ್ರಮವು ಕಳ್ಳತನದ ಸಮಸ್ಯೆ ಪರಿಹರಿಸಲು ಪೂರಕವಾಗಿದೆ. ಅಲ್ಲದೇ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆ ಪತ್ತೆ ಮತ್ತು ಖಚಿತಪಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಇದನ್ನೂ ಓದಿ: ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

ಈ ಕ್ಯೂಆರ್ ಕೋಡ್ ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮಾಡುತ್ತದೆ. ಜೊತೆಗೆ ಉತ್ತಮ ದಾಸ್ತಾನು ನಿರ್ವಹಣೆ ಸರಿಯಾಗಿ ಆಗುತ್ತಿಯೇ ಎಂಬುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಸಚಿವರು ಟ್ವಿಟ್ಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದ ವೀಡಿಯೋ ಇದಾಗಿದೆ. ವೀಡಿಯೋದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಕ್ಯೂಆರ್‌ ಕೋಡ್‌ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುತ್ತಿರುವ ದೃಶ್ಯವಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *