ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ದಾಖಲೆ

ನವದೆಹಲಿ: ಕೊರೊನಾ ಅವಧಿಯ ನಂತರ ಭಾರತದ ದೇಶೀಯ ವಿಮಾನಯಾನ ಕ್ಷೇತ್ರವು ಪುನಶ್ಚೇತನಗೊಂಡಿದ್ದು, ದೇಶೀಯ ವಿಮಾನ (Airlines) ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ನವೆಂಬರ್ ತಿಂಗಳಿನಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟು ಅತ್ಯಧಿಕ ಮಟ್ಟವನ್ನು ತಲುಪಿದ್ದು, ಕಳೆದ ಗುರುವಾರ ಒಂದೇ ದಿನ 4,63,417 ಮಂದಿ ವಿಮಾನದ ಮೂಲಕ ಸಂಚರಿಸಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಕಾರಾತ್ಮಕ ಮನೋಭಾವ, ಪ್ರಗತಿಪರ ನೀತಿಗಳು ಮತ್ತು ಪ್ರಯಾಣಿಕರ ವಿಶ್ವಾಸದಿಂದಾಗಿ ವಿಮಾನ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ ಎಂದು ಹೇಳಿದೆ.

ಕಳೆದ ಗುರುವಾರ 5,998 ವಿಮಾನ ಪ್ರಯಾಣವಾಗಿದ್ದು, ಈ ಪೈಕಿ 4,63,417 ಮಂದಿ ವಿಮಾನಗಳ ಮೂಲಕ ಸಂಚರಿಸಿದ್ದಾರೆ. 2022 ಇದೇ ದಿನಕ್ಕೆ 5,413 ಬಾರಿ ವಿಮಾನಗಳ ಹಾರಾಟವಾಗಿದ್ದು, 3,86,002 ಮಂದಿ ವಿಮಾನಗಳ ಮೂಲಕ ಸಂಚರಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಬಿಜೆಪಿ ಮನವಿ