ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ ಪ್ರೇಮಿಗಳಾ? ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರೇಮ್ ಕಹಾನಿ

ಖಾಸಗಿ ಮನರಂಜನಾ ವಾಹಿನಿಯೊಂದರ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಡಾಲಿ ಧನಂಜಯ್, ತಮ್ಮದೇ ಸಿನಿಮಾದ ನಾಯಕಿ ಅಮೃತಾ ಅಯ್ಯಂಗಾರಿಗೆ ಲವ್ ಪ್ರಪೋಷ್ ಮಾಡಿದ್ದರು. ಅದೂ, ಅಮೃತಾ ಮುಂದೆ ಮಂಡಿಯೂರಿ ಕುಳಿತು, ರೊಮ್ಯಾಂಟಿಕ್ ಆಗಿ ಕವಿತೆಯೊಂದನ್ನು ಬರೆದು ಹೇಳಿದ್ದರು. ‘ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ.. ಇಲ್ಲ ತುಳಿದು, ಕಾಲ್ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ’ ಎಂದು ಕವಿತೆ ಹೇಳಿ ಬೆರಗು ಮೂಡಿಸಿದ್ದರು.

ಕವಿತೆ ಮಾತ್ರವಲ್ಲ, ಅಮೃತಾಗೆ ಗುಲಾಬಿ ಹೂವು ಕೂಡ ನೀಡಿದ್ದರು. ಧನಂಜಯ್ ನೀಡಿದ ಹೂವು ಪಡೆದ ಅಮೃತಾ ಅಷ್ಟೇ ರೊಮ್ಯಾಂಟಿಕ್ ಆಗಿ ಬಡವ ರಾಸ್ಕಲ್ ಸಿನಿಮಾದ “ಗಿಣಿಯೇ ನನ್ನ ಗಿಣಿಯೇ’ ಹಾಡು ಕೂಡ ಹೇಳಿ, ಇಬ್ಬರ ಮಧ್ಯೆ ಏನೋ ಇದೆ ಎನ್ನುವುದಕ್ಕೆ ಪುಷ್ಠಿಕೊಟ್ಟಿದ್ದರು. ಅಲ್ಲಿಂದ, ಇಬ್ಬರ ಅಭಿಮಾನಿಗಳಿಗೂ ಅನುಮಾನ ಮೂಡಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಮೃತಾ ಅಯ್ಯಂಗಾರ ಈ ಕುರಿತು ಹೇಳುವುದೇ ಬೇರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

ನಾವಿಬ್ಬರೂ ಒಟ್ಟಿಗೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದೇವೆ. ಸಿನಿಮಾ ಪ್ರಚಾರಕ್ಕೆ ಹೋಗುವಾಗ ಒಟ್ಟಿಗೆ ಹೋಗಿದ್ದೇವೆ. ಹಾಗಂತ ನಾವಿಬ್ಬರೂ ಲವರ್ಸ್ ಎನ್ನುವುದು ಸರಿಯಲ್ಲ. ಧನಂಜಯ್ ನನ್ನ ಒಳ್ಳೆಯ ಸ್ನೇಹಿತ. ಗೋಲ್ಡನ್ ‍ಗ್ಯಾಂಗ್ ಕಾರ್ಯಕ್ರಮದಲ್ಲಿ ನಡೆದದ್ದು, ಅದೊಂದು ಕಲ್ಪಿತ ಘಟನೆ ಅಷ್ಟೇ. ಅದರಾಚೆ ಏನೂ ಇಲ್ಲ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಧನಂಜಯ್ ಅಭಿಮಾನಿಗಳು ಮಾತ್ರ ಅದನ್ನು ಒಪ್ಪುತ್ತಿಲ್ಲ. ಹಾಗಾಗಿ ಇಬ್ಬರೂ ಗಾಸಿಪ್ ಗಳಿಗೆ ಆಹಾರ ಆಗಿದ್ದಾರೆ. ಈ ಕುರಿತು ಧನಂಜಯ್ ಏನು ಹೇಳುತ್ತಾರೋ ಕಾದು ನೋಡಬೇಕು.

Live Tv

Comments

Leave a Reply

Your email address will not be published. Required fields are marked *