ಬೀಜಿಂಗ್: ನಾಯಿಗಳ ಕತ್ತಿಗೆ ಚೈನ್ ಅಥವಾ ಹಗ್ಗ ಹಾಕಿ ಕಟ್ಟಿಹಾಕೋದು ಕಾಮನ್. ಕೆಲವೊಮ್ಮೆ ಅವು ಗಟ್ಟಿಯಾಗಿ ಎಳೆದು ಚೈನ್‍ನಿಂದಲೇ ಬಿಡಿಸಿಕೊಳ್ಳೋದನ್ನ ನೋಡಿರ್ತೀವಿ. ಆದ್ರೆ ನಾಯಿಯನ್ನ ಗೇಟ್‍ನೊಳಗೆ ಕೂಡಿಹಾಕಿದ್ರೂ ಅದು ಸುಲಭವಾಗಿ ಅದರಿಂದ ಹೊರಬರೋ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಚೀನಾದ ಶಾಂಕ್ಸಿ ಪ್ರಾಂತ್ಯದ ಲಿನ್ಫೆನ್‍ನಲ್ಲಿ ಈ ವಿಡಿಯೋವನ್ನ ಚಿತ್ರೀಕರಿಸಲಾಗಿದೆ. ಬಂಧಿಯಾಗಿದ್ದ ಮಾಲಿನೋಯಿಸ್ ತಳಿಯ ನಾಯಿಯೊಂದು ಹೊರಗೆ ಬರೋಕೆ ಬೊಗಳುತ್ತಿತ್ತು. ಹಾಗೆ ಗೇಟ್ ಚಿಲಕವನ್ನ ತನ್ನ ಬಾಯಿ ಹಾಗೂ ಮುಂಗಾಲುಗಳಿಂದ ತಳ್ಳುತ್ತಾ ಒದಾಡ್ತಿತ್ತು. ಹಾಗೆ ಮಾಡುತ್ತಿದ್ದಾಗ ಚಿಲಕವನ್ನ ಒಮ್ಮೆ ಮುಂಗಾಲಿನಿಂದ ಮೇಲೆತ್ತಿದೆ.

ನಂತರ ಸುಲಭವಾಗಿ ಮುಂಗಾಲನ್ನ ಕೈನಂತೆ ಬಳಸಿ ಗೇಟಿನ ಚಿಲಕ ತೆಗೆದು ಹೊರಬರೋದನ್ನ ವಿಡಿಯೋದಲ್ಲಿ ನೋಡಬಹುದು.
https://www.youtube.com/watch?v=NAXsoGlV0sw



Leave a Reply