ಅಥೆನ್ಸ್: 18 ತಿಂಗಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಿಸುತ್ತಿರುವ ಘಟನೆ ಗ್ರೀಕ್ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
40 ವರ್ಷದ ಮಾಲೀಕ ನವೆಂಬರ್ 9, 2017ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಸಿಮೆಂಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಾಲೀಕ ಮೃತಪಟ್ಟ ಸ್ಥಳದಿಂದ ಅವರ ಮನೆಗೆ 12 ಕಿ.ಮೀ ದೂರವಿದ್ದು, ಆ ನಾಯಿ ಇಲ್ಲಿಯವರೆಗೆ ಹೇಗೆ ಪ್ರಯಾಣಿಸಿತು ಎಂದು ಸಾರ್ವಜನಿಕರು ಹಾಗೂ ಪ್ರಾಣಿ ಸಂರಕ್ಷಣಾ ತಜ್ಞರು ಗೊಂದಲಕ್ಕೊಳಗಾಗಿದ್ದಾರೆ.

ನಾಯಿ ತನ್ನ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಟ್ಟು ಬರಲು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ ಸ್ಥಳೀಯರು ನಾಯಿಗಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲದೆ ಆ ನಾಯಿಗಾಗಿ ಕಂಬಳಿ ನೀಡಿ ಪ್ರತಿನಿತ್ಯ ನೀರು ಹಾಗೂ ಆಹಾರವನ್ನು ನೀಡುತ್ತಿದ್ದಾರೆ.

ಮಾಲೀಕ ಮೃತಪಟ್ಟ ಸ್ಥಳದಲ್ಲಿ ಕೆಲ ಕುಟುಂಬದವರು ನಾಯಿಯನ್ನು ದತ್ತು ಪಡೆಯಲು ಮುಂದಾದರು. ಆದರೆ ಆ ನಾಯಿ ಬಿಸಿಲು – ಚಳಿ ಏನೇ ಇದ್ದರೂ ಸಹ ಆ ಜಾಗವನ್ನು ಬಿಡಲು ನಿರಾಕರಿಸುತ್ತಿದೆ. ಸ್ಥಳೀಯರು ಆ ನಾಯಿಯನ್ನು ‘ಗ್ರೀಕ್ ಹಚಿಕೋ’ ಎಂದು ಕರೆಯಲು ಪ್ರಾರಂಭಿಸಿದ್ದಾರೆ.
https://www.youtube.com/watch?time_continue=79&v=UMu_XL8Mhbg

Leave a Reply