ಕಾರಿಗೆ ನಾಯಿಯನ್ನು ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದುಕೊಂಡು ಹೋದ: ವಿಡಿಯೋ ವೈರಲ್

ಜೈಪುರ: ಚಾಲಕನೊಬ್ಬ ನಾಯಿಯನ್ನು ರಸ್ತೆಯಲ್ಲಿ ತನ್ನ ಕಾರಿನಿಂದ ಧರಧರನೇ ಎಳೆದುಕೊಂಡು ಹೋಗಿರುವ ಘಟನೆಯೊಂದು ರಾಜಸ್ಥಾನದ ಉದಯ್‌ಪುರ್‌ನಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಬಾಬು ಖಾನ್ ನಾಯಿಯನ್ನು ಎಳೆದುಕೊಂಡು ಹೋದ ಚಾಲಕ. ಬಾಬು ಖಾನ್ ನಾಯಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ಅದು ಮೃತಪಟ್ಟಿದೆ. ಪ್ರಾಣಿಗಳ ಹತ್ಯೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಬಾಬು ಖಾನ್‌ನನ್ನು ಬಂಧಿಸಿಲಾಗಿತ್ತು. ಸ್ಥಳೀಯ ನ್ಯಾಯಾಲಯ ಈಗ ಬಾಬು ಖಾನ್‌ಗೆ ಜಾಮೀನು ಮಂಜೂರು ಮಾಡಿದೆ.

ಈ ವಿಡಿಯೋ ವೈರಲ್ ಆದ ನಂತರ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಯಿತು. ಈ ವೈರಲ್ ವಿಡಿಯೋವನ್ನು ಉದಯ್‌ಪುರದ ಶೋಭಾಪುರದಲ್ಲಿ ಐದು ದಿನಗಳ ಹಿಂದೆ ಸೆರೆ ಹಿಡಿಯಲಾಗಿತ್ತು. ಶುಕ್ರವಾರ ರಾತ್ರಿ ಅದೇ ಸ್ಥಳದಲ್ಲಿ ನಾಯಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಬಾಬು ಖಾನ್‌ನ ಗ್ಯಾರೇಜಿನ ಹೊರಗೆ ನಾಯಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಅದನ್ನು ಎಸೆಯಲು ಹತ್ತಿರದ ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದನು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು, ಬಾಬು ನಾಯಿಯನ್ನು ಕಾರಿಗೆ ಕಟ್ಟುವಾಗ ಅದು ಜೀವಂತವಾಗಿಯೇ ಇತ್ತು ಎಂದು ಹೇಳಿದ್ದಾರೆ. ಆದರೆ ಪೊಲೀಸರ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ನಾಯಿ ಆಘಾತದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಅಲ್ಲದೆ ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ನಾಯಿಯ ದೇಹಕ್ಕೆ ಸಾಕಷ್ಟು ಗಾಯಗಳಾಗಿತ್ತು. ಶೀಘ್ರದಲ್ಲೇ ಬಾಬು ಖಾನ್ ವಿರುದ್ಧ ಚಾರ್ಚ್ಶೀಟ್ ದಾಖಲಿಸುತ್ತೇವೆ ಎಂದು ಕೇಲ್ವಾ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *