ಆಸ್ಪತ್ರೆ ಆವರಣದಲ್ಲಿ ನವಜಾತ ಶಿಶುವನ್ನು ಕಚ್ಚಿಕೊಂಡು ಓಡಾಡಿದ ಶ್ವಾನ

ಶಿವಮೊಗ್ಗ : ನವಜಾತ ಹೆಣ್ಣು ಶಿಶುವನ್ನು (Baby) ಶ್ವಾನವೊಂದು (Dog) ಕಚ್ಚಿಕೊಂಡು ಆಸ್ಪತ್ರೆಯ (Hospital) ಆವರಣದಲ್ಲಿ ಓಡಾಡಿರುವ ಘಟನೆ ಶಿವಮೊಗ್ಗದ (shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ (Hospital) ಆವರಣದಲ್ಲಿ ಶ್ವಾನವೊಂದು ನವಜಾತ ಶಿಶುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್‌ನ ಆವರಣದಲ್ಲಿ ಓಡಾಡಿದೆ. ಇದನ್ನು ಗಮನಿಸಿದ ನಾಗರಿಕರು ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿದ್ದಾರೆ. ನಾಯಿ ಶಿಶುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ. ಇದನ್ನೂ ಓದಿ: ಬಣ್ಣದ ಮಾತುಗಳಿಂದ ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಮದುವೆಯಾಗಿದ್ದ ಶಿಕ್ಷಕ ಅರೆಸ್ಟ್

ನಂತರ ಭದ್ರತಾ ಸಿಬ್ಬಂದಿ ವೈದ್ಯರ ಬಳಿ ಶಿಶುವನ್ನು ಕೊಂಡೊಯ್ದಿದ್ದಾರೆ. ತಪಾಸಣೆ ಬಳಿಕ ಶಿಶು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಜನಿಸಿದ ನಂತರ ಯಾರೋ‌ ಮಗುವನ್ನು ವಾರ್ಡ್ ಹಿಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ. ನಂತರ ನಾಯಿ ಅದನ್ನು‌ ಕಚ್ಚಿಕೊಂಡು ಓಡಾಡಿದೆ. ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹೆಚ್ಚುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ