ರಾಮ, ರಹೀಮನ ಭಕ್ತಿ ಜೊತೆ ದೇಶ ಭಕ್ತಿ ಗಟ್ಟಿಗೊಳಿಸೋಣ: ಮೋದಿ

ನವದೆಹಲಿ: ಸುಪ್ರೀಂ ಕೋರ್ಟ್ ಪ್ರಕಟಿಸಿದ ಐತಿಹಾಸಿಕ ಅಯೋಧ್ಯೆ ತೀರ್ಪುಗೆ ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಬೆನ್ನಲ್ಲೆ ರಾಮಜನ್ಮಭೂಮಿ ಪ್ರಕರಣದ ಕುರಿತು ಸುಪ್ರೀಂ ತೀರ್ಪು ನೀಡಿದ್ದು ಸ್ವಾಗತಾರ್ಹ. ರಾಮ ಭಕ್ತರಾಗಲಿ, ರಹೀಮನ ಭಕ್ತರಾಗಲಿ ಎಲ್ಲರೂ ಜೊತೆ ಸೇರಿ ದೇಶ ಭಕ್ತಿ ಗಟ್ಟಿಗೊಳಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅಯೋಧ್ಯೆ ತೀರ್ಪು ಹೊರಬಿದ್ದ ಬಳಿಕ ಸರಣಿ ಟ್ವೀಟ್ ಮಾಡಿ ನರೇಂದ್ರ ಮೋದಿ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ಅಯೋಧ್ಯೆ ತೀರ್ಪನ್ನು ಯಾರೂ ಗೆಲುವು, ಸೋಲಿನ ಭಾವನೆಯಲ್ಲಿ ನೋಡುವುದು ಬೇಡ. ರಾಮನ ಭಕ್ತ ಅಥವಾ ರಹೀಮನ ಭಕ್ತನೆನ್ನುವುದು ಬೇಡ, ಇದು ಎಲ್ಲರೂ ಜೊತೆಗೂಡಿ ದೇಶಭಕ್ತಿಯನ್ನು ಗಟ್ಟಿಗೊಳಿಸುವ ಸಮಯ ಎಂದು ಮೋದಿ ಏಕತೆಯ ಮಂತ್ರ ನುಡಿದಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ ಶಾಂತಿ, ಸಾಮರಸ್ಯ ಹೆಚ್ಚಾಗಲಿ. ಈ ಅಯೋಧ್ಯೆ ತೀರ್ಪು ಹಲವಾರು ವಿಷಯಗಳಲ್ಲಿ ಮಹತ್ವವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಏಕತೆ ಮತ್ತು ಸಹಬಾಳ್ವೆ ಹೆಚ್ಚಾಗಲಿ, ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಯಾವುದೇ ವಿವಾದವನ್ನು ಕಾನೂನಿನ ಪ್ರಕಾರ ಇತ್ಯರ್ಥಪಡಿಸಬಹುದು ಎಂಬುದನ್ನು ಈ ತೀರ್ಪು ಸಾಬೀತು ಮಾಡಿದೆ. ದಶಕಗಳಿಂದ ಇತ್ಯರ್ಥವಾಗದೇ ಉಳಿದಿದ್ದ ವಿವಾದವನ್ನು ಸುಪ್ರೀಂ ಕೋರ್ಟ್ ತಿಳಿಗೊಳಿಸಿದೆ. ಈ ತೀರ್ಪಿನ ನಂತರವೂ 130 ಭಾರತೀಯರು ಶಾಂತಿ, ಸಂಯಮ ಕಾಪಾಡಿಕೊಳ್ಳಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿನ 2.77 ಎಕ್ರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧನಿಕ ಪೀಠ ಸರ್ವ ಸಮ್ಮತದ ತೀರ್ಪು ಪ್ರಕಟಿಸಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *