ಬೆಂಗಳೂರು: ಅಪಾರ್ಟ್‍ಮೆಂಟ್ 5ನೇ ಫ್ಲೋರ್‍ನಿಂದ ಜಿಗಿದು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆ ಪಕ್ಕದ ಮನೆಯಲ್ಲಿ ವಸ್ತುಗಳನ್ನು ಕದಿಯಲು ಹೋಗಿ ಆಯತಪ್ಪಿ ಬಿದ್ದು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗುತ್ತಿದೆ.
ಸೋನಾಲ್ ಅಗರ್‍ವಾಲ್(25) ಕಿಮ್ಸ್ ಆಸ್ಪತ್ರೆಯ ಅವಿನಾಶ್ ಅಗರ್‍ವಾಲ್ ಪತ್ನಿ. ಬೆಂಗಳೂರಿನ ಉತ್ತರಹಳ್ಳಿ ಮಂತ್ರಿ ಅಪಾರ್ಟ್ ಮೆಂಟ್ ಈ ಬ್ಲಾಕ್ ನಿವಾಸಿಯಾಗಿರೋ ಇವರು, ತನ್ನ ಮೂರು ತಿಂಗಳ ಕಂದಮ್ಮನನ್ನು ಬಿಟ್ಟು 5ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಈ ಪ್ರಕರಣದ ಕುರಿತು ಅನುಮಾನ ವ್ಯಕ್ತವಾಗಿತ್ತು.

ಗಣೇಶ ಹಬ್ಬದ ಹಿನ್ನಲೆ ಅಪಾರ್ಟ್ ಮೆಂಟ್ ನಿವಾಸಿಗಳೆಲ್ಲರೂ ಪೂಜೆಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದರು. ಈ ವೇಳೆ ಪಕ್ಕದ ಮನೆಯ ಅಪಾರ್ಟ್‍ಮೆಂಟ್‍ನಿಂದ ಬಿದ್ದಿರುವ ಮೃತ ಸೋನಾಲ್ ಅಗರ್‍ವಾಲ್ ಒಳಉಡುಪುಗಳಲ್ಲಿ ಚಿನ್ನದ ಸರ, ಹಣ, ಕೀ ಪತ್ತೆಯಾಗಿತ್ತು. ಹೀಗಾಗಿ ಕಳ್ಳತನ ಮಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply