ಇನ್ನು 6 ತಿಂಗಳು ‘ಟಗರು’ ಮೌನ

ಬೆಂಗಳೂರು: ಗಟ್ಟಿ ಧ್ವನಿಯ ಗ್ರಾಮೀಣ ಸೊಗಡಿನ ಕಂಚಿನ ಕಂಠ ಇನ್ನು ಮೌನವಾಗಿ ಬಿಡುತ್ತಾ ಅನ್ನೋ ಪ್ರಶ್ನೆಯೊಂದು ಎದ್ದಿದೆ. ಮಾತಿನಿಂದಲೇ ಎಲ್ಲರನ್ನು ಮೋಡಿ ಮಾಡುತ್ತಿದ್ದ ಸಿದ್ದರಾಮಯ್ಯ ಮೌನ ವಹಿಸಲಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾದ ಸಿದ್ದರಾಮಯ್ತ ಇನ್ನು ಕನಿಷ್ಟ 6 ತಿಂಗಳು ಮೌನ ಆಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಂದರೆ ಮಾತಿಗೇನು ಸಮಸ್ಯೆ ಇಲ್ಲ. ಆದರೆ ವೇದಿಕೆಗಳ ಮೇಲೆ, ಸದನದಲ್ಲಿ ಜೋರಾಗಿ ಅಬ್ಬರಿಸಿ ಮಾತನಾಡುವಂತಿಲ್ಲ. ಗಟ್ಟಿ ಧ್ವನಿಯಲ್ಲಿ ಕಿರುಚಿ ಮಾತನಾಡುವಂತಿಲ್ಲ ಎಂದು ಸೂಚಿಸಿದ್ದಾರೆ.

ಸ್ಟಂಟ್ ಅಳವಡಿಕೆ ಆಗಿರುವುದರಿಂದ 5-6 ತಿಂಗಳು ತೀವ್ರ ಒತ್ತಡದ ಕೆಲಸ ಹಾಗೂ ದೀರ್ಘ ಅವಧಿ ಏರು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಕನಿಷ್ಟ 6 ತಿಂಗಳು ರಾಜ್ಯದ ಜನರಿಗೆ ಸಿದ್ದರಾಮಯ್ಯರ ಗ್ರಾಮೀಣ ಶೈಲಿಯ ಮೋಡಿಯ ಮಾತು ಮಿಸ್ ಆಗೋದು ಗ್ಯಾರಂಟಿಯಾಗಿದೆ. ಇದನ್ನೂ ಓದಿ: ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ: ಸಿದ್ದರಾಮಯ್ಯ

ಸಿದ್ದು ಭೇಟಿಯಾದ ಸಿಎಂ:
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು. ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಭೇಟಿ ವೇಳೆ ಹಾಜರಿದ್ದರು.

ಸಿಎಂ ಬಿಎಸ್‍ವೈ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಚೇರ್ ನೀಡಿ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಸಿಎಂ, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರೆಯಲ್ಲೇ ಇದ್ದು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಿರಿ ಎಂದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ

 

Comments

Leave a Reply

Your email address will not be published. Required fields are marked *