ನಾವಿಬ್ಬರು ಮದುವೆ ಆಗ್ತೀವಿ ಎಂದು ನಂಬಿಸಿ ವೈದ್ಯನಿಂದ ಲೈಂಗಿಕ ದೌರ್ಜನ್ಯ

ಬೆಂಗಳೂರು: ವೈದ್ಯನೊಬ್ಬ ವೈದ್ಯೆಗೆ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎಚ್‍ಬಿಆರ್ ಬಡವಾಣೆಯಲ್ಲಿ ನಡೆದಿದೆ.

ಡಾ. ವಿ.ಎಲ್ ಮನೋಜ್ ಕುಮಾರ್ ವೈದ್ಯನ ವಿರುದ್ಧ ಸಂತ್ರಸ್ತೆ ಆರೋಪ ಮಾಡಿದ್ದಾರೆ. ಮನೋಜ್ ಕುಮಾರ್ ಮ್ಯಾಟ್ರಿಮೋನಿಯಲ್ಲಿ ವೈದ್ಯೆಯನ್ನು ಪರಿಚಯ ಮಾಡಿಕೊಂಡಿದ್ದನು. ಇಬ್ಬರು ಪರಿಚಯವಾದ ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಈ ವೇಳೆ ಮನೋಜ್ ಯುವತಿಯನ್ನು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಈ ಬಗ್ಗೆ ಯುವತಿ ಡಾ. ಮನೋಜ್ ಕುಮಾರ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮನೋಜ್ ವಿರುದ್ಧ ಐಪಿಸಿ ಸೆಕ್ಷನ್ 417 ಮತ್ತೆ 376 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?
ನನ್ನ ತಾಯಿ 2016ರ ಫೆಬ್ರವರಿಯಲ್ಲಿ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಅಲ್ಲದೇ ನನ್ನ ವಿವರವನ್ನು ಮ್ಯಾಟ್ರಿಮೋನಿಯಲ್ಲಿ ಪೋಸ್ಟ್ ಮಾಡಿದ್ದರು. ಈ ಸಮಯದಲ್ಲಿ ಎಂ.ವಿ.ಎಲ್ ಮನೋಜ್ ಕುಮಾರ್ ನನ್ನನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ. ನಂತರ ಇಬ್ಬರು ಜೊತೆಯಾಗಿ ಓಡಾಡಿಕೊಂಡು ಇದ್ದೀವಿ. ಮನೋಜ್ ಎಚ್‍ಬಿಆರ್ ಲೇಔಟ್‍ನ ಕಲ್ಯಾಣನಗರದಲ್ಲಿ ಮನೆ ಮಾಡಿಕೊಂಡಿದ್ದನು. ಅಲ್ಲದೇ ಪದೇ ಪದೇ ನನ್ನನ್ನು ಮನೆಗೆ ಕರೆಸಿಕೊಂಡು ಹೇಗಿದ್ದರು ನಾವಿಬ್ಬರು ಮದುವೆ ಆಗುತ್ತೇವೆ ಎಂದು ನಂಬಿಸಿ ನನ್ನ ಇಚ್ಚೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಮನೋಜ್ ತಂದೆ-ತಾಯಿ ಹಾಗೂ ಅವರ ಅಕ್ಕ ಇವರೆಲ್ಲರೂ ಮನೋಜ್ ಜೊತೆ ನನ್ನ ಮದುವೆ ಮಾಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *