ಆರ್‌ಟಿಐಯಡಿ ಸಲ್ಲಿಸಿದ ಅರ್ಜಿಯನ್ನು ಉಡಾಫೆ ಮಾಡಬೇಡಿ – ಕೆ. ಬದ್ರುದ್ದೀನ್ ಎಚ್ಚರಿಕೆ

ಮಂಡ್ಯ: ಮಾಹಿತಿ ಹಕ್ಕು ಕಾಯ್ದೆಯಡಿ (Right to Information Act) ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ. ಬದ್ರುದ್ದೀನ್ (Badruddin K) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಂದು ಮಂಡ್ಯ (Mandya) ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಆರ್‌ಟಿಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ, ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದಾಗಿದೆ. ಅರ್ಜಿದಾರರು ಆರ್‌ಟಿಐ ಅಡಿ ಮಾಹಿತಿ ಕೋರಿದ 30 ದಿನದೊಳಗಾಗಿ ಅಗತ್ಯ ಮಾಹಿತಿ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: `ಮನಿ’ ಕೊಟ್ಟರಷ್ಟೇ ಸರ್ಕಾರಿ `ಮನೆ’ – ಜಮೀರ್‌ಗೆ ಗೊತ್ತಿಲ್ಲ ಅಂದ್ರೆ ತನಿಖೆ ಮಾಡಿಸಲಿ: ಬಿ.ಆರ್ ಪಾಟೀಲ್ ಬಾಂಬ್‌

ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ಸರಳವಾಗಿದೆ, ಓದಿ ಅರ್ಥೈಸಿಕೊಳ್ಳಿ. ಯಾವುದೇ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೇಳಿರುವ ಮಾಹಿತಿಯನ್ನು ಒದಗಿಸಿ. ಅದಕ್ಕೂ ಮುನ್ನ ನೀಡಬಹುದಾದ ಹಾಗೂ ನೀಡಲಾಗದ ಮಾಹಿತಿಗಳನ್ನ ವರ್ಗೀಕರಿಸಿಟ್ಟುಕೊಳ್ಳಿ. ಬಂದ ಅರ್ಜಿ ಓದಿ ನಿಮ್ಮ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೂ ಎಂದು ಮೊದಲು ಖಚಿತಪಡಿಸಿಕೊಳ್ಳಿ, ನಿಮ್ಮ ವ್ಯಾಪ್ತಿಗೆ ಬಾರದಿರುವ ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಕೆಯಾದ 5 ದಿನದೊಳಗೆ ವರ್ಗಾಯಿಸಿ, ಗಮನಕ್ಕೆ ತನ್ನಿ ಎಂದು ತಿಳಿವಳಿಕೆ ನೀಡಿದರು. ಇದನ್ನೂ ಓದಿ: ನಾನು ಬಾಬಾ ರಾಮ್‍ದೇವ್ ಶಿಬಿರದಲ್ಲಿ ತರಬೇತಿ ಪಡೆದ ಯೋಗ ಪಟು: ಲಕ್ಷ್ಮಿ ಹೆಬ್ಬಾಳ್ಕರ್

ಅಧಿಕಾರಿಗಳ ಕಣ್ತಪ್ಪಿನಿಂದ ಯಾವುದಾದರೂ ಮಾಹಿತಿ ನೀಡುವಲ್ಲಿ ಲೋಪ ಉಂಟಾದ್ರೆ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತನ್ನಿ. ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ 1,135 ಮೇಲ್ಮನವಿ ಅರ್ಜಿಗಳು ಬಾಕಿ ಇದೆ. ಎಲ್ಲಾ ಜಿಲ್ಲೆಗೆ ಹೋಲಿಸಿದ್ರೆ ಮಂಡ್ಯ ಜಿಲ್ಲೆಯ ಶೇ.3 ರಷ್ಟು ಮಾತ್ರ ಇದೆ. ಇದು ಶೂನ್ಯಕ್ಕೆ ಬರಬೇಕು. ಅಧಿಕಾರಿಗಳು ಅರ್ಜಿ ಸಲ್ಲಿಸಿದವರಿಗೆ ಅಗತ್ಯ ಮಾಹಿತಿ ಒದಗಿಸಿ, ಮಾಹಿತಿ ಇಲ್ಲದಿದ್ದಲ್ಲಿ ಮಾಹಿತಿ ಏಕೆ ಲಭ್ಯವಿಲ್ಲ ಎಂಬುದನ್ನೂ ಪರಿಶೀಲಿಸಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತನಿಖೆ ಏನಾಯ್ತು – ಪಾದಯಾತ್ರೆ ನೆನಪಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ ಪಾಟೀಲ್