ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತೆ: ಶ್ರೀರಾಮುಲು

-ಚೀನಾದಲ್ಲೂ ಸಾಕಷ್ಟು ಮಂದಿ ಇದನ್ನೇ ಅನುಸರಿಸಿ ಗುಣವಾಗಿದ್ದಾರೆ

ಬಳ್ಳಾರಿ: ಈ ಹಿಂದೆ ಸೂರ್ಯನ ಕಿರಣ ಎಲ್ಲಿ ಹೆಚ್ಚು ಇರುತ್ತೋ ಅಲ್ಲಿ ಹೆಚ್ಚು ಜನ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಾರೆ ಎಂದಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತ ಎಂದು ಟಿಪ್ಸ್ ಕೊಟ್ಟಿದ್ದಾರೆ.

ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾಡನಾಡಿದ ಸಚಿವರು, ಕೊರೊನಾ ಸೋಂಕಿನಿಂದ ಗುಣಮುಖರಾಗಲು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ. ತಣ್ಣೀರಿನ ಬದಲು ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೊರೊನಾ ಕಡಿಮೆ ಆಗುತ್ತದೆ. ಚೀನಾದಲ್ಲೂ ಇದೇ ರೀತಿ ಜನರು ಮಾಡಿ ಗುಣಮುಖರಾಗಿದ್ದಾರೆ. ನಾನು ವೈದ್ಯನಲ್ಲ ಆದರೆ ಯಾವುದೋ ಆರ್ಟಿಕಲ್‍ನಲ್ಲಿ ಈ ಬಗ್ಗೆ ಓದಿದ್ದೆ ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆ ಹಾವೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಬೀಳುತ್ತಿವೆಯೋ ಅಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಚಿವರು:
ಇಂದು ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಆಹಾರದ ಕಿಟ್ ವಿತರಣೆ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಆರೋಗ್ಯ ಸಚಿವರೇ ಮರೆತಿದ್ದರು. ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಅವರು ದಾನಿಗಳು ನೀಡಿದ್ದ ಆಹಾರದ ಕಿಟ್ ವಿತರಣೆಗೆ ಬಂದಿದ್ದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕಿಟ್ ಹಂಚಿದ್ದಾರೆ. ಇತ್ತ ಸಚಿವರ ಹಿಂಬಾಲಕರಿಂದಲೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *