ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

ಬೆಂಗಳೂರು: ಬ್ಲೂಫಿಲಂ ನೋಡಿ ಪತ್ನಿಗೆ ನಿತ್ಯ ಟಾರ್ಚರ್ ಕೊಡುತ್ತಿದ್ದಾನೆಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಪ್ತನ ಮೇಲೆ ಆರೋಪ ಕೇಳಿ ಬಂದಿದೆ.

ಚನ್ನಪಟ್ಟಣದಲ್ಲಿ ಡಿಕೆಶಿ ಜೊತೆ ಗುರುತಿಸಿಕೊಂಡಿರುವ ಕಾಂತರಾಜ್, 30 ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಪತ್ನಿ ಬೇರೆ ಜಾತಿ ಎಂದು ಮನೆಯವರು ವಿರೋಧಿಸಿದ್ದರಿಂದ ಮತ್ತೊಂದು ಮದುವೆ ಮಾಡಿಸಿಕೊಂಡಿದ್ದಾನೆ.

ಕಾಂತರಾಜ್ ಮೊದಲ ಪತ್ನಿಯನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ಇರಿಸಿದ್ದನು. ಇತ್ತ ಇತ್ತೀಚಿಗೆ ಮಂಡ್ಯದಲ್ಲಿ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಆ ಬಳಿಕ ವಿನಾಕಾರಾಣ ಟಾರ್ಚರ್ ಕೊಡುತ್ತಿದ್ದಾರೆಂದು ಮೊದಲ ಪತ್ನಿ ಇದೀಗ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ ಕಾಂತರಾಜ್ ಬ್ಲೂಫಿಲಂ ನೋಡಿ ನೀಲಿ ಚಿತ್ರದಲ್ಲಿರುವುದು ನೀನೇ ಎಂದು ನಿತ್ಯ ಟಾರ್ಚರ್ ನೀಡುತ್ತಿದ್ದಾನೆ. ಕಾಂತರಾಜ್ ಬೇರೋಬ್ಬಳನ್ನು ನೋಡಿ ನೀಲಿ ಚಿತ್ರದಲ್ಲಿರುವ ಮುಖ ನಿನ್ನ ಮುಖದ ಚಹರೆ ಒಂದೇ ರೀತಿ ಇದೆ ಎಂದು ಕಿರುಕುಳ ನೀಡುತ್ತಿದ್ದಾನೆ ಅಂತ ಅವರು ಆರೋಪಿಸಿದ್ದಾರೆ.

ನೀನು ನೀಲಿ ಚಿತ್ರದ ದಂಧೆಗೆ ಇಳಿದ್ದಿದ್ದೀಯಾ. ನಿನ್ನ ಸಹವಾಸ ನನಗೆ ಬೇಡ ಎಂದು ಕಾಂತರಾಜ್ ಮೊದಲ ಪತ್ನಿಯನ್ನು ದೂರ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋವನ್ನು
ಗೆಳೆಯರೆಲ್ಲರಿಗೂ ಕಳಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆಂದು ಪತ್ನಿ ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪತಿ ಕಾಂತರಾಜು ವಿರುದ್ಧ ದೂರು ನೀಡಿದ್ದಾರೆ.

ಕಾಂತರಾಜ್ ಎರಡು ಮದುವೆ ಸಾಲದೆಂದು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದನು. ಮಂಡ್ಯದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ತ್ರೀ ಲೋಲ ಕಾಂತರಾಜ್ ನಡೆ ಬಗ್ಗೆ ಪ್ರಶ್ನಿಸಿದ್ರೆ ಧಮ್ಕಿ ಹಾಕುತ್ತಾನೆ. ನನಗೆ ಸಿಎಂ ಹಾಗೂ ಡಿಕೆಶಿ ಗೊತ್ತು. ಅದೇನ್ ಮಾಡ್ಕೊಳ್ತಿ ಮಾಡ್ಕೋ ಎಂದು ಕಾಂತರಾಜ್ ಬೆದರಿಸುತ್ತಾನೆ ಅಂತ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಾಂತರಾಜ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದು, ಸದ್ಯ ಪತಿಯ ನಡೆಯಿಂದ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *