ಬೆಂಗಳೂರು: ಆರೋಪಿ ದಿವ್ಯಾ ಹಾಗರಗಿ ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗುವುದ್ದಕ್ಕೆ ನನಗೂ ನೋಟಿಸ್ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ ನನಗೂ ಈಗ ಆ ಫೋಟೋ ಬಗ್ಗೆ ಹೇಳಿದ್ರು. ನೂರಾರು ಜನ ಬಂದು ನನ್ನ ಭೇಟಿ ಮಾಡ್ತಾರೆ. ನಾನು ಮಂತ್ರಿಯಾಗಿದ್ದವನು. ಮಂತ್ರಿ ಆಗಿದ್ದಾಗ ದಿವ್ಯಾ ಹಾಗರಗಿ ಯಾವುದೋ ಡೆಲಿಗೇಶನ್ ಕರೆ ತಂದಿದ್ದರು ಮಾತನಾಡಿ ಹೋಗಿದ್ದರು ಎಂದರು.

ಬಿಜೆಪಿಯವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಮತನಾಡುತ್ತಾ ಇರಬೇಕು.ನನ್ನ ಹೆಸರು ಬರಬೇಕಲ್ಲ. ಓಡಾಡ್ತಿರುತ್ತೆ ಓಡುವಷ್ಟು ದಿನ ಓಡಲಿ ಎಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್
ಇದೇ ವೇಳೆ ಪ್ರಶಾಂತ್ ಕಿಶೋರ್ ಕೈ ಸೇರ್ಪಡೆ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ತೀರ್ಮಾನ ಅವರು ತಿಳಿಸಿದ್ದಾರೆ. ಬಹಳ ದಿನಗಳಿಂದ ಚರ್ಚೆಗಳು ನಡೆದವು. ನಾನು ಇಲ್ಲಿ ಅದರ ಬಗ್ಗೆ ಮಾತನಾಡಲ್ಲ. ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ

Leave a Reply