ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹುಡುಕಿದ್ದ ಡಿಕೆಶಿಗೆ ದೋಸ್ತಿಗಳು ತಿರುಗೇಟು

ಬೆಂಗಳೂರು: ರಾಮಮಂದಿರ (Ram Mandir) ಆಮಂತ್ರಣ ಮತ್ತು ಮಂತ್ರಾಕ್ಷತೆ ವಿಚಾರದಲ್ಲಿ ರಾಜಕೀಯ ಮುಂದುವರಿದಿದೆ. ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯದ (Annabhagya) ಅಕ್ಕಿ ಹುಡುಕಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೋಸ್ತಿ ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರು, ರಾಮ ಮಂದಿರ ಆಗಬಾರದೆಂದು ಪಣ ತೊಟ್ಟವರು, ಇವತ್ತು ಅಕ್ಷತೆ ಮಾಡುತ್ತಿರುವುದಕ್ಕೆ ಸಂತೋಷ ಪಡುತ್ತಿರುವುದು ಒಂದು ಸಂತೋಷವೇ. ಆದರೆ ಅವರು ಸಂತೋಷ ಪಡುತ್ತಿರುವ ಕಾರಣ ಮಾತ್ರ ವಿಚಿತ್ರ. ಕೊಡಲಾಗದ ಅನ್ನ ಭಾಗ್ಯದ ಅಕ್ಕಿಯದೇ ಅಕ್ಷತೆ ಎಂದು ತಿಳಿಯುವುದು ಭ್ರಮಾಲೋಕದಲ್ಲಿ ಇರುವವರ ನಾಟಕ. ಕೊಡಲಾರದ ಅಕ್ಕಿಯಲ್ಲಿ ಅಕ್ಷತೆ ಆಗುತ್ತಿದೆ ಎಂದು ಈ ಸುಳ್ಳು ಹೇಳುವ ಪಾಪಿಗಳು ನೀವು ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ಇನ್ನೂ ಬಂದಿಲ್ಲ: ಪರಮೇಶ್ವರ್

ಅಕ್ಷತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹುಡುಕಿಕೊಡಿ ಎಂದು ಅಶೋಕ್ ಸವಾಲ್ ಹಾಕಿದ್ದಾರೆ. ಅನ್ನಭಾಗ್ಯದ ಅಕ್ಕಿ ಕೊಡುತ್ತಿರುವುದು ಮೋದಿ. ಪ್ರತಿ ಅಕ್ಕಿಯಲ್ಲೂ ಮೋದಿ ಹೆಸರಿದೆ ಎಂದು ಮುನಿರತ್ನ ಪ್ರತಿಪಾದಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಈ ಅಕ್ಕಿಯನ್ನು ದೊಡ್ಡ ಆಲದ ಹಳ್ಳಿಯಲ್ಲಿ ಬೆಳೆದಿರೋದಾ ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿಯವರು ಮಂತ್ರಾಕ್ಷತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಮಂಕಾಳು ವೈದ್ಯ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ: ಹಿ. ಪ್ರದೇಶದ ಕೈ ಸಚಿವ

ಹೈಕಮಾಂಡ್ ತೀರ್ಮಾನದ ಮೇಲೆ ನಮ್ಮ ಅಯೋಧ್ಯೆ ಪ್ರವಾಸ ನಿಂತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇನ್ನು ಜನವರಿ 22ರಂದು ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಅದೇಶಿಸಿರುವುದಕ್ಕೆ ಬಿಜೆಪಿ ಸಂಕಟ ಪಡುತ್ತಿದೆ. ಅವರಿಗೆ ಭಕ್ತಿ, ಪೂಜೆ, ಪುನಸ್ಕಾರ, ಸಂಸ್ಕಾರ ಬೇಕಿಲ್ಲ. ಅವರಿಗೆ ಬೇಕಿರುವುದು ಅದರ ಹೆಸರಿನಲ್ಲಿ ರಾಜಕೀಯ ಎಂದು ಕಾಂಗ್ರೆಸ್ ಟೀಕಿಸಿದೆ. ಅಲ್ಲದೇ ನಾವು ರಾಮಭಕ್ತರು ಎನ್ನುವುದಕ್ಕೆ ಹಲವು ಸಮರ್ಥನೆ ನೀಡಿದೆ. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

ಈ ಬಗ್ಗೆ ಕಾಂಗ್ರೆಸ್ ಸರಣಿ ವಾದ ಮಾಡಿದೆ. ನಾವು ರಾಮಭಕ್ತರೇ. ಭಾರತದ ಹಳ್ಳಿ ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ರಾಮರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷದ ಅಧಿನಾಯಕರಾಗಿದ್ದರು. ಗೋಡ್ಸೆ ಸಿಡಿಸಿದ ಗುಂಡು ಗಾಂಧಿ ಎದೆ ಸೀಳಿದಾಗ, ಅವರಾಡಿದ ಕೊನೆ ಮಾತು ಹೇ ರಾಮ್. 1985-86ರಲ್ಲಿ ಅಯೋಧ್ಯೆಯಲ್ಲಿ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿದ್ದು ರಾಜೀವ್ ಗಾಂಧಿ. 1989ರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ವಿಹೆಚ್‌ಪಿಗೆ ಅವಕಾಶ ಕಲ್ಪಿಸಿದವರು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಮೊದಲ ಹೆಜ್ಜೆ ಇಡದೇ ಇದ್ದಿದ್ರೆ ಬಿಜೆಪಿಯವರಿಗೆ ಈ ಚಿಂತನೆಯೇ ಬರುತ್ತಿರಲಿಲ್ಲ. ದೂರದರ್ಶನದಲ್ಲಿ ರಾಮಾಯಣದ ಸೀರಿಯಲ್ ಪ್ರಸಾರ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರ. ರಾಮ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಶ್ರೀರಾಮನ ಹೆಸರು ಹೇಳಿಕೊಂಡೇ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಮ ಬಿಜೆಪಿಯ ಸ್ವತ್ತಲ್ಲ ಎಂದು ಕಾಂಗ್ರೆಸ್ ಸರಣಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಹತ್ವದ ಸಭೆ- ಕಾಂಗ್ರೆಸ್ ವೈಫಲ್ಯಗಳೇ ಕಮಲಕ್ಕೆ ಅಸ್ತ್ರ