ಮನುಷ್ಯತ್ವ ಇಲ್ಲದವರ ಕ್ಷಮೆ ಬೇಡ – ಸಚಿವ ಡಿಕೆಶಿ

ಶಿವಮೊಗ್ಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ಸಿಎಂ ಸಿದ್ದರಾಯ್ಯ ಅವರ ಮಗನ ಸಾವಿನ ಬಗ್ಗೆ ಮಾತನಾಡಿ ತಮಗೆ ಮನುಷ್ಯತ್ವ ಇಲ್ಲ ಎಂದು ತೋರಿಸಿದ್ದಾರೆ. ಇಂತಹ ಮನುಷ್ಯತ್ವ ಇಲ್ಲದವರ ಕ್ಷಮೆ ನಮಗೆ ಬೇಡ ಎಂದು ಹೇಳಿದ್ದಾರೆ.

ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಧುಬಂಗಾರಪ್ಪ ಅವರ ಪರ ಪ್ರಚಾರ ನಡೆಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಕೊಲೆ ಮಾಡಿದ ಮೇಲೆ ಕ್ಷಮಾಪಣೆ ಕೇಳಿದರೆ ಏನು ಬರುತ್ತದೆ. ಮಾತು, ಮುತ್ತು ಒಡೆದರೆ ಹೋಯ್ತು ಎಂದು ಹೇಳುತ್ತಾರೆ. ಹಾಗೆಯೇ ಸಿದ್ದರಾಮಯ್ಯ ಅವರ ಬಗ್ಗೆ ಗಾಲಿ ಜನಾರ್ದನ ರೆಡ್ಡಿ ಅವರು ನೀಡಿದ ಹೇಳಿಕೆ ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಈ ಬಗ್ಗೆ ರಾಮುಲು, ಯಡಿಯೂರಪ್ಪ ಕ್ಷಮಾಪಣೆ ಕೇಳಬೇಕು. ಅಲ್ಲದೇ ರೆಡ್ಡಿ ಹೇಳಿಕೆಗೆ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಜನಾರ್ದನ ರೆಡ್ಡಿ ಅವರ ವಿರುದ್ಧವೂ ಕಿಡಿಕಾರಿದ ಸಚಿವ ಡಿಕೆಶಿ, ಖಾವಿ ಹಾಕಿಕೊಂಡು ಜನಾರ್ದಾನ ರೆಡ್ಡಿ ಹೀಗೆ ಮಾತನಾಡಿದ್ದಾರೆ. ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ನಮಗೂ ರೆಡ್ಡಿಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಸಂಸ್ಕಾರ, ಮನುಷ್ಯತ್ವ ಇಲ್ಲದ ಮನುಷ್ಯನ ಕ್ಷಮಾಪಣೆ ಬೇಕಿಲ್ಲ ಎಂದರು.

ಕೇಂದ್ರ ಸರ್ಕಾರದ ನಾಲ್ಕುವರೆ ವರ್ಷದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ದಿನನಿತ್ಯ ಜನರು ಬೆಲೆ ಹೆಚ್ಚಳದಿಂದ ಸಂಕಷ್ಟ ಅನುಭವಿಸುತ್ತಾರೆ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಈ ಹಿಂದೆ ಎಂದು ಇಂತಹ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿರಲಿಲ್ಲ. ಅದ್ದರಿಂದ ಬಿಜೆಪಿಯಲ್ಲಿ ಬಿಎಸ್‍ವೈ ತಮ್ಮ ಪುತ್ರರನ್ನೇ ಅಭ್ಯರ್ಥಿ ಎಂದು 5 ನಿಮಿಷದಲ್ಲಿ ಘೋಷಣೆ ಮಾಡಿದರು. ಇದರ ಬಗ್ಗೆ ಈಶ್ವರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿ 5 ಜನ ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದ್ದರು. ಆದರೆ ಕ್ಷೇತ್ರದ ಜನತೆಯೇ ಇದಕ್ಕೆ ಉತ್ತರ ನೀಡುತ್ತಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *