ಜೇಮ್ಸ್ ಚಿತ್ರವನ್ನೂ ಯಾವುದೇ ಕಾರಣಕ್ಕೂ ತೆಗೆಯಬಾರದು: ಡಿಕೆಶಿ

ಕಲಬುರಗಿ: ಪುನೀತ್‍ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್, ಅದನ್ನು ಯಾವುದೇ ಚಿತ್ರಮಂದಿರದಿಂದಲೂ ತೆಗೆಯಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಮಾನವೀಯತೆ ಇರಬೇಕು. ಕನ್ನಡದ ನಟ, ಆತ್ಮೀಯ ದೇಶದ ಇತಿಹಾಸದಲ್ಲೇ ಅಷ್ಟು ಜನ ಗೌರವ ಸಲ್ಲಿಸಿಲ್ಲ. ಅವರ ಕೊನೇ ಸಿನಿಮಾ ಜೇಮ್ಸ್ ಅನ್ನು ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಆದರೆ, ಬೆಂಗಳೂರು ನಗರದಲ್ಲೇ ಕೆಲವರು ಥಿಯೇಟರ್ ಖಾಲಿ ಮಾಡಿಸುವಂತೆ ಗಲಾಟೆ ಮಾಡ್ತಿದ್ದಾರೆ. ಚಿತ್ರಮಂದಿರ ಮಾಲೀಕರು ನನಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಬಿಜೆಪಿ ಅವರಿಗೆ ಮಾನವೀಯತೆ ಇದ್ದರೆ ಜೆಮ್ಸ್ ಸಿನಿಮಾ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ

ತೆರಿಗೆ ವಿನಾಯ್ತಿ ಯಾಕೆ?
`ದಿ ಕಾಶ್ಮೀರ್ ಫೈಲ್ಸ್’ ಅನ್ನು ಯಾರು ಏನುಬೇಕಾದರೂ ಮಾಡಲಿ. ಅದು ವಾಸ್ತವದ ಕಥೆಯಲ್ಲ. ಒಂದು ಹೊಸ ಸ್ಟೋರಿ ಅಷ್ಟೇ. ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಅವರು ಸ್ಟೋರಿ ಮಾಡುತ್ತಾರೆ. ಹಿಂದೆಲ್ಲ ಇಂತಹದ್ದು ಬೇಕಾದಷ್ಟು ನಡೆದಿದೆ. ಮಹಾತ್ಮಗಾಂಧಿ ಹತ್ಯೆ, ಇಂದಿರಾ ಗಾಂಧಿ ಹತ್ಯೆಗಿಂತಲೂ ಸ್ಟೋರಿಗಳು ಬೇಕಾ? ವಾಸ್ತವಾಂಶ ಬಿಟ್ಟು ಎಷ್ಟು ಸ್ಟೋರಿ ಬೇಕಾದರೂ ಕ್ರಿಯೆಟ್ ಮಾಡಬಹುದು. ಆದರೆ, ಕಾಶ್ಮೀರ್ ಫೈಲ್ಸ್‍ಗೆ ತೆರಿಗೆ ವಿನಾಯ್ತಿ ನೀಡುವಷ್ಟು ನೈತಿಕತೆ ಅದರಲ್ಲಿ ಏನಿದೆ? ಇದು ಕಾಂಗ್ರೆಸ್ ವಿರೋಧಿಸಲು ಮಾಡುತ್ತಿರುವ ಕೆಲಸ ನಾವು ಸಂವಿಧಾನ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್‍ಕುಮಾರ್ ಅವರು ಬರುತ್ತಿದ್ದಾಗ ನಾವು ನಿಮ್ಮನ್ನು ರೆಕಮೆಂಡ್ ಮಾಡಿದ್ದೇವೆ ಎಂದು ತಡೆದರಂತೆ ಇದು ನನಗೆ ಆಪ್ತ ಮೂಲಗಳಿಂದ ಗೊತ್ತಾಯಿತು. ಆದರೂ ಪರವಾಗಿಲ್ಲ. ಯಾರು ಬರುತ್ತಾರೋ ಬಿಡುತ್ತಾರೋ ಮೇಕೆದಾಟು ನಾಡಿನ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ ಅದನ್ನು ನಾವು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *