ಕಾಂಗ್ರೆಸ್ ಸೇರ್ಪಡೆಗೆ ಎಷ್ಟು ಜನ ಆಸಕ್ತರು ಎಂದು ಹೇಳಲ್ಲ: ಡಿಕೆಶಿ

– ಕಾಂಗ್ರೆಸ್ ಒಂದು ಕುಟುಂಬ, ಯಾವುದೇ ಕಲಹ ಇಲ್ಲ

ನವದೆಹಲಿ: ಉಪ ಚುನಾವಣೆ ಘೋಷಣೆ ವಿಚಾರ ಬೆನ್ನಲ್ಲೇ 2 ದಿನಗಳಿಂದ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಡುಬಿಟ್ಟಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಪದಾಧಿಕಾರಿಗಳ ಆಯ್ಕೆ ಸಂಬಂಧ ದೆಹಲಿಗೆ ಬಂದಿದ್ದೇನೆ. ಚರ್ಚೆ ಮಾಡಿ, ಪ್ರೊಪೊಸಲ್ ಕೊಡುತ್ತೇನೆ. ದಸರಾ ಒಳಗೆ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ವಿಳಂಬ ಆಗಿಲ್ಲ, ಸಮರ್ಥರನ್ನು ಹುಡುಕಿ ಜವಬ್ದಾರಿ ನೀಡುತ್ತಿದ್ದೇವೆ. ಯುವಕರಿಗೆ ಮಣೆ ಹಾಕಲಾಗುವುದು. ಫೀಲ್ಡ್‍ನಲ್ಲಿ ಇದ್ದು ಕೆಲಸ ಮಾಡುವವರಿಗೆ ಆದ್ಯತೆ ನೀಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಅಪೌಷ್ಟಿಕತೆ ನಿವಾರಣೆಗೆ 35 ಬೆಳೆ ತಳಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಆಪರೇಷನ್ ಹಸ್ತದ ಬಗ್ಗೆ ಸದ್ಯಕ್ಕೆ ತಲೆಕೆಡಿಸಿಕೊಂಡಿಲ್ಲ. ಬಿಜೆಪಿಯವರು ಯಾರ್ಯಾರನ್ನು ಕರೆದುಕೊಳ್ಳುತ್ತಾರೆ, ಕರೆದುಕೊಳ್ಳಲಿ. ಅವರದು ಮಗಿಯಲಿ ಆಮೇಲೆ ನೊಡೋಣ. ನಮ್ಮ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಇದೆ. ನಮ್ಮಲ್ಲಿ ಬರುವವರು ಕಾರ್ಯಕರ್ತರಾಗಿ ಬರಬಹುದು, ನಾಯಕರಾಗಿ ಬೆಳೆಯಲಿ ಎಂದು ಪಕ್ಷಕ್ಕೆ ಸೇರುವವವರಿಗೆ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

ಸಿದ್ದರಾಮಯ್ಯ ಮುಂದಿನ ಸಿಎಂ ಹೇಳಿಕೆ ವಿಚಾರ, ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಂಗೆ ಗೊತ್ತಿಲ್ಲ, ಈ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಂಡು ಹೇಳುತ್ತೇನೆ. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜೀನಾಮೆ ವಿಚಾರ, ರಾಜಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ, ಸುರೇಶ್ ಗೌಡರೂ ಬಗ್ಗೆ ಏನು ಮಾತನಾಡಲ್ಲ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ

ಕಾಂಗ್ರೆಸ್ ಸೇರ್ಪಡೆಗೆ ಎಷ್ಟು ಜನ ಅಸಕ್ತರು ಎಂದು ಹೇಳಲ್ಲ, ನಂಗೂ ಬಿಜೆಪಿಗೂ ವ್ಯಾತಾಸ ಇದೆ. ಅವರದು ಸಿನಿಮಾ ಸ್ಟೈಲ್, ಕಾಂಗ್ರೆಸ್‍ಗೆ ಯಾರ್ ಬರ್ತಾರೆ ಹೇಳಲ್ಲ. ಮಾಧ್ಯಮದಲ್ಲಿ ಮಾತನಾಡುವ ವಿಚಾರ ಅಲ್ಲ.  ಕಾಂಗ್ರೆಸ್ ಪಾರ್ಟಿ ಒಂದು ಕುಟುಂಬ, ಯಾವುದೇ ಕಲಹ ಇಲ್ಲ. ಸೋನಿಯಗಾಂಧಿ, ರಾಹುಲ್‍ಗಾಂಧಿ ಹೇಳಿದ ಹಾಗೇ ಕೇಳುತ್ತೇವೆ. ಸೋನಿಯಾ ಗಾಂಧಿ ಭೇಟಿ ಮಾಡಿಲ್ಲ, ಅವರು ಊರಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *