ಇಡಿ ಸಮನ್ಸ್ ಬೆನ್ನಲ್ಲೇ ಶಕ್ತಿದೇವತೆ ಮೊರೆಹೋದ ಡಿಕೆಶಿ

ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶಿಸಿದೆ. ಈ ಬೆನ್ನಲ್ಲೇ ಡಿಕೆಶಿ ಶಕ್ತಿದೇವತೆಯ ಮೊರೆ ಹೋಗಿದ್ದಾರೆ.

ಡಿ.ಕೆ ಶಿವಕುಮಾರ್ ರಾತ್ರೋರಾತ್ರಿ ಪತ್ನಿ ಮತ್ತು ಮಗಳ ಜೊತೆ ಶಕ್ತಿ ದೇವತೆಯ ಪೂಜೆ ಮಾಡಿದ್ದಾರೆ. ಇಡಿ ನೋಟಿಸ್ ಜಾರಿ ಬೆನ್ನಲ್ಲಿಯೇ ಗುರುವಾರ ರಾತ್ರಿ ಡಿಕೆಶಿ ಕನಕಪುರಕ್ಕೆ ಹೋಗುವುದಾಗಿ ಹೇಳಿ ರ್ಯಾಡಿಸನ್ ಹೋಟೆಲ್‍ನಿಂದ ರಹಸ್ಯ ಸ್ಥಳಕ್ಕೆ ಹೋಗಿ ಪೂಜೆಗೆ ತೆರಳಿದ್ದು, ಅಲ್ಲಿ ಶಕ್ತಿ ದೇವತೆಗೆ ಪೂಜೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ ಐಟಿ ರೇಡ್ ಆದಾಗಲೂ ಡಿಕೆಶಿ ದೇವರಗಳ ಮೊರೆ ಹೋಗಿ ಪೂಜೆ ಮಾಡಿಸಿದ್ದರು. ಈಗ ಅಮವಾಸ್ಯೆ ಹಿಂದೆ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೋಟಿಸ್ ಜಾರಿಯಾಗಿದೆ. ಹೀಗಾಗಿ ಅಮಾವಾಸ್ಯೆ ಶಕ್ತಿ ದೇವತೆಗೆ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ.

ಇಂದು ಡಿಕೆಶಿ ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ. ಮಂಗಳವಾರದ ತನಕ ವಿನಾಯಿತಿ ನೀಡುವಂತೆ ಇಡಿಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. ತಮ್ಮ ವಕೀಲರ ಮೂಲಕ ಪತ್ರ ಕಳುಹಿಸಿ ಕೊಟ್ಟು ಅವರ ಬಳಿ ಮಾಹಿತಿ ಪಡೆಯಿರಿ ಎಂದು ಡಿಕೆಶಿ ಹೇಳಲಿದ್ದಾರೆ. ಅನಾರೋಗ್ಯ, ವೈಯಕ್ತಿಕ ಕಾರಣಕ್ಕೆ ಹಾಜರಾಗಲು ವಿನಾಯಿತಿ ಕೇಳಲಿರೋ ಡಿಕೆಶಿ ಇಂದು ದೆಹಲಿಗೆ ಹೋಗುವುದು ಬಹುತೇಕ ಅನುಮಾನವಾಗಿದೆ. ವಕೀಲರನ್ನು ಕಳುಹಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *